ಭಾಷಣ ವೇಳೆ ರಾಹುಲ್ ಗಾಂಧಿಗೆ ಕೈ ಕೊಟ್ಟ ಅನುವಾದಕ: ನೀವು ಹಿಂದಿಯಲ್ಲೇ ಮಾತನಾಡಿ ಎಂದು ಹೇಳಿ ಎಸ್ಕೇಪ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಜರಾತ್‌ ಚುನಾವಣಾ ಅಖಾಡದಲ್ಲಿ ಭಾರಿ ಪ್ರಚಾರ ನಡೆಯುತ್ತಿದೆ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಇತ್ತ ಕಡೆ ಬರುತ್ತಿದ್ದರೆ, ಇತ್ತ ಪ್ರಧಾನಿ ಮೋದಿ ಬೃಹತ್ ರ್ಯಾಲಿ ನಡೆಸುತ್ತಿದ್ದಾರೆ.

ರಾಹುಲ್ ಗಾಂಧಿ ಚುನಾವಣಾ ಪ್ರಚಾರವನ್ನು ನಡೆಸುತ್ತಿದ್ದು, ಭಾರತ್ ಜೋಡೋ ಯಾತ್ರೆಯ ಸೂರತ್ ಸಮಾವೇಶದಲ್ಲಿ ಗುಜರಾತ್ ಜನತೆಯನ್ನು ತನ್ನತ ಸೆಳೆಯಲು ತಮ್ಮ ಭಾಷಣವನ್ನು ಗುಜರಾತಿ ಭಾಷಗೆ ಅನುವಾದ ಮಾಡಲು ನಾಯಕರಿಗೆ ಸೂಚಿಸಿದ್ದಾರೆ.

ಹೀಗೆ ಶುರುವಾದ ರಾಹುಲ್ ಗಾಂಧಿ ಭಾಷಣ ಅರ್ಧ ತಲುಪುತ್ತಿದ್ದಂತೆ ಗುಜರಾತ್ ಭಾಷೆಯಲ್ಲಿ ಅನುವಾದ ಮಾಡುವವವರು, ನೀವು ಹಿಂದಿಯಲ್ಲೇ ಮಾತನಾಡಿ ಎಂದು ವೇದಿಕೆಯಿಂದ ಕೆಳಗಿಳಿದಿದ್ದಾರೆ.ಇದರಿಂದ ರಾಹುಲ್ ಗಾಂಧಿ ಗೊಂದಲಕ್ಕೀಡಾಗಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ರಾಹುಲ್ ಗಾಂಧಿ ಭಾಷಣ ಅನುವಾದ ಮಾಡುವ ಜವಾಬ್ದಾರಿಯನ್ನು ಕಾಂಗ್ರೆಸ್ ನಾಯಕ ಭರತ್ ಸಿಂಗ್ ಸೋಲಂಕಿ ವಹಿಸಿಕೊಂಡಿದ್ದರು.

ಸೋಲಂಕಿ ರಾಹುಲ್ ಅವರಲ್ಲಿ ನೀವು ಹಿಂದಿಯಲ್ಲೇ ಮಾತನಾಡಿ ಎಂದು ಹೇಳಿ ನೇರವಾಗಿ ವೇದಿಕೆಯಿಂದ ಇಳಿದು ಹೋಗಿದ್ದು, ವೇದಿಕೆಯಲ್ಲಿದ್ದ ಇತರ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಕೈ ಸನ್ನೇ ಮೂಲಕ ಎಚ್ಚರಿಸುವ ಕೆಲಸ ಮಾಡಿದ್ದಾರೆ. ಆದರೆ ಸೋಲಂಕಿ ಮಾತ್ರ ನೀವು ಹಿಂದಿಯಲ್ಲಿ ಮಾತನಾಡಿ ಎಂದಾಗ ನೀವು ಅನುವಾದ ಮಾಡುವುದು ಬೇಡವೆ ಎಂದು ರಾಹುಲ್ ಕೇಳಿದಾಗ ವೇದಿಕೆಯಿಂದ ಕೆಳಗಿಳಿದು ಹೋಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!