ಕಾಶ್ಮೀರದ ಲಾಲ್‌ ಚೌಕದಲ್ಲಿ ಅರಳಿದ ತ್ರಿವರ್ಣ ಧ್ವಜ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಕಾಶ್ಮೀರಿಂದ ಕನ್ಯಾಕುಮಾರಿಯವರೆಗೆ ಇಂದು ಸ್ವಾತಂತ್ರ್ಯವನ್ನು ಸಂಭ್ರಮದಲ್ಲಿ ಆಚರಣೆ ಮಾಡಲಾಗಿದೆ. ಈವರೆಗೂ ಗಲಾಟೆಯಿಂದಲೇ ಸುದ್ದಿಯಾಗುತ್ತಿದ್ದ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿರುವ ಲಾಲ್‌ ಚೌಕದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಬಳಿಕ, ವಂದೇ ಮಾತರಂ ಹಾಗೂ ಭಾರತ್‌ ಮಾತಾ ಕಿ ಜೈ ಎಂದು ಘೋಷಣೆ ಕೂಗಲಾಗಿದೆ.

ಶ್ರೀನಗರದ ಲಾಲ್ ಚೌಕ್‌ನ ಘಂಟಾಘರ್‌ನಲ್ಲಿ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಸ್ವಾತಂತ್ರ್ಯ ದಿನದಂದು ತ್ರಿವರ್ಣ ಧ್ವಜವನ್ನು ಹಾರಿಸಲಾಗಿದೆ. ಆದರೆ, ಈ ವರ್ಷ ಗಣರಾಜ್ಯೋತ್ಸವದಂದು ಅಲ್ಲಿ ಧ್ವಜಾರೋಹಣ ಮಾಡಲಾಗಿತ್ತು. ಗಡಿಯಾರ ಗೋಪುರವನ್ನು 1980 ರಲ್ಲಿ ನಿರ್ಮಾಣ ಮಾಡಲಾಗಿತ್ತು. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಲಾಲ್‌ ಚೌಕ್‌ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿರಲಿಲ್ಲ.”

ಲಡಾಖ್‌, ಸಿಯಾಚಿನ್‌ನಲ್ಲೂ ಹಾರಿದ ಧ್ವಜ:
ಐಟಿಬಿಪಿ ಯೋಧರು ಲಡಾಖ್‌ನ ಪಾಂಗಾಂಗ್ ತ್ಸೋ ಸರೋವರದ ಬಳಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಇದು ಹಿಮಾಲಯದಲ್ಲಿ 14,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ನೆಲೆಗೊಂಡಿರುವ ಉದ್ದವಾದ ಕಿರಿದಾದ, ಆಳವಾದ, ಎಂಡಾರ್ಫಿಕ್ (ನೆಲವುಳ್ಳ) ಸರೋವರವಾಗಿದೆ. ದೇಶದ ಅತ್ಯಂತ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ತ್ರಿವರ್ಣ ಧ್ವಜವನ್ನು ಹಾರಿಸಿದರು. ಸಿಯಾಚಿನ್ ಎತ್ತರ ಸುಮಾರು 5,400 ಮೀಟರ್‌ನಲ್ಲಿ ತಿರಂಗಾವನ್ನು ಹಾರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!