Wednesday, August 17, 2022

Latest Posts

ನಮ್ಮ ಮೆಟ್ರೋ: 855 ಮೀ. ಸುರಂಗ ಕೊರೆದ ‘ಊರ್ಜಾ’ ಯಂತ್ರ

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕಂಟೋನ್ಮೆಂಟ್- ಶಿವಾಜಿನಗರ ನಡುವೆ ಸುರಂಗ ನಿರ್ಮಿಸುವ ಕಾರ್ಯವನ್ನು ಊರ್ಜಾ ಯಂತ್ರವು ಇಂದು ಪೂರ್ಣಗೊಳಿಸಿದೆ.
ಬೆಂಗಳೂರು ನಗರದ ನಮ್ಮ ಮೆಟ್ರೋ ಯೋಜನೆಯ 2 ನೇ ಹಂತದ ವಿಸ್ತರಿತ ಮಾರ್ಗ ಇದಾಗಿದೆ.
ಊರ್ಜಾ ಯಂತ್ರವು ಸುರಂಗ ಮಾರ್ಗ ಕೊರೆದು ಹೊರ ಬಂದ ಕ್ಷಣಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಕ್ಷಿಯಾಗಿದ್ದಾರೆ.
ನಮ್ಮ ಮೆಟ್ರೋ 2ನೇ ಹಂತದ ವಿಸ್ತರಿತ ರೀಚ್-6 ಮಾರ್ಗದ ಮೊದಲ ಸುರಂಗ ಮಾರ್ಗ ಇದಾಗಿದೆ. ಚೀನಾದಿಂದ ಊರ್ಜಾ ಯಂತ್ರವನ್ನು ಆಮದು ಮಾಡಿಕೊಳ್ಳಲಾಗಿದೆ. ಯಂತ್ರ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 855 ಮೀಟರ್ ಉದ್ದದ ಸುರಂಗ ಕೊರೆದಿದೆ. ಈ ಮೂಲಕ ನಮ್ಮ ಮೆಟ್ರೋದ ಪಿಂಕ್ ಲೈನ್‌ನಲ್ಲಿ ಪ್ರಗತಿ ಸಾಧಿಸಿದ ಮೊದಲ ಸುರಂಗ ಕೊರೆಯುವ ಯಂತ್ರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!