Wednesday, August 10, 2022

Latest Posts

ದೆಹಲಿ ಅಸೆಂಬ್ಲಿಯೊಳಗೆ ಪತ್ತೆಯಾಯ್ತು ಬ್ರಿಟಿಷರು ಬಳಸಿದ ಸುರಂಗ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಚಾಂದಿನಿ ಚೌಕ್‌ನ ಕೆಂಪು ಕೋಟೆಗೆ ಸಂಪರ್ಕ ಕಲ್ಪಿಸುವ ರಹಸ್ಯ ಸುರಂಗವನ್ನು ಸಿವಿಲ್ ಲೈನ್ಸ್‌ನ ದೆಹಲಿ ವಿಧಾನ ಸಭೆಯ ಕೊಠಡಿಯೊಂದರ ಒಳಗಿನಿಂದ ಪತ್ತೆಮಾಡಲಾಗಿದೆ.
ಈ ಬಗ್ಗೆ ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ಮಾತನಾಡಿದ್ದು, ಈ ಸುರಂಗ ಶಾಸಕಾಂಗ ಸಭೆಯನ್ನು ಕೆಂಪು ಕೋಟೆಗೆ ಸಂಪರ್ಕಿಸುತ್ತದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಥಳಾಂತರಿಸುವಾಗ ಬ್ರಿಟಿಷರು ಇದನ್ನು ಬಳಸುತ್ತಿದ್ದರು ಎಂದು ಹೇಳಿದ್ದಾರೆ.
ಇದೀಗ ಸುರಂಗದ ಬಾಯಿ ಪತ್ತೆಹಚ್ಚಲಾಗಿದೆ. ಆದರೆ ಮೆಟ್ರೋ ಹಾಗೂ ಒಳಚರಂಡಿ ಸ್ಥಾಪನೆಯಿಂದಾಗಿ ಸುರಂಗದ ಎಲ್ಲಾ ಮಾರ್ಗಗಳು ನಾಶವಾಗಿದೆ. ಮತ್ತಷ್ಟು ಅಗೆಯುವುದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss