ಸಿನಿಮಾ ಪೈರಸಿ ತಡೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾಗಳ ಪೈರಸಿ ಸಮಸ್ಯೆ ತಪ್ಪಿಸಲು ಸಹಾಯವಾಗುವ ಸಿನಿಮಾಟೋಗ್ರಾಫ್ ಮಸೂದೆ 2023ಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಸಿನಿಮಾಗಳು ರಿಲೀಸ್ ಆದ ದಿನವೇ ಇಂಟರ್ನೆಟ್‌ನಲ್ಲಿ ಪೈರಸಿ ಕಾಪಿ ಲಭ್ಯವಿರುತ್ತದೆ, ಸಾಕಷ್ಟು ಮಂದಿ ಥಿಯೇಟರ್ ಕಾಪಿಗಳನ್ನೇ ನೋಡಿ ಸುಮ್ಮನಾಗುತ್ತಾರೆ. ಇದರಿಂದ ಸಿನಿ ತಂಡಕ್ಕೆ ನಷ್ಟವಾಗುತ್ತದೆ, ಅಲ್ಲದೆ ಈ ರೀತಿ ಮಾಡಿ ಸಿನಿಮಾ ಅಪ್‌ಲೋಡ್ ಮಾಡುವುದು ತಪ್ಪು. ಸಿನಿಮಾಗಳು ಇಂಟರ್ನೆಟ್‌ನಲ್ಲಿ ಹರಿದಾಡುವುದನ್ನು ತಡೆಗಟ್ಟಲು ಈ ಮಸೂದೆ ಸಹಾಯವಾಗಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ತಿದ್ದುಪಡಿ ಮಸೂದೆಯ ಪ್ರಕಾರ, ಇನ್ನು ಮುಂದೆ ಸಿನಿಮಾದ ಪೈರೇಟೆಡ್ ದೃಶ್ಯಗಳನ್ನು ತುಣುಕುಗಳನ್ನು, ಹಾಡುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತಿಲ್ಲ. ಜೊತೆಗೆ ಪೈರಸಿ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮಸೂದೆ ಅವಕಾಶ ನೀಡಿದೆ.

ಪೈರಸಿ ಮಾಡಿದರೆ ಈ ಹಿಂದೆ ಮೂರು ತಿಂಗಳ ಶಿಕ್ಷೆ ನೀಡಲಾಗುತ್ತಿತ್ತು, ಇದನ್ನು ಈಗ ಮೂರು ವರ್ಷಗಳಿಗೆ ಏರಿಸಲಾಗಿದೆ. ಈ ಹಿಂದೆ ಯು/ಎ/ಯುಎ ಮಾದರಿಯ ಪ್ರಮಾಣ ಪತ್ರ ಚಾಲ್ತಿಯಲ್ಲಿತ್ತು. ಆದರೆ ಇದೀಗ ವಯೋಮಾನದ ಆಧರಿತ ಪ್ರಮಾಣಪತ್ರ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!