ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಲಾಕ್ಡೌನ್ ಮಾರ್ಗಸೂಚಿಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ದಿನಸಿ, ತರಕಾರಿ ಸೇರಿದಂತೆ ಅಗತ್ಯವಸ್ತು ಖರೀದಿಸಲು ವಾಹನ ಬಳಸಬಹುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಹೇಳಿದೆ.
ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿ ಟ್ವೀಟ್ ಮಾಡಿದ್ದು, ತರಕಾರಿ, ದಿನಸಿ ತರಲು ವಾಹನ ಬಳಕೆ ಮಾಡಲು ಅನುಮತಿ ನೀಡಲಾಗಿದೆ, ನಿಮ್ಮ ಊರಿನ ಸಮೀಪ ಸುತ್ತಮುತ್ತಲೂ ತರಕಾರಿ, ದಿನಸಿ ತರಲು ವಾಹನ ಬಳಸಬಹುದು ಎಂದು ಟ್ವೀಟ್ನಲ್ಲಿ ಸ್ಪಷ್ಟಪಡಿಸಲಾಗಿದೆ. ಅಗತ್ಯವಸ್ತು ಖರೀದಿಸಲು ವಾಹನ ಬಳಸಬಹುದು, ಅನಗತ್ಯ ತಿರುಗಾಟಕ್ಕೆ ಅಲ್ಲ ಎಂದು ಹೇಳಿದೆ.
ರಾಜ್ಯ ಸರ್ಕಾರ 14 ದಿನ ಲಾಕ್ ಡೌನ್ ವಿಧಿಸಿ ಹೊರಡಿಸಿದ ಮಾರ್ಗಸೂಚಿಯಲ್ಲಿ ತರಕಾರಿ, ದಿನಸಿ ತರಲು ನಡೆದುಕೊಂಡೇ ಹೋಗಬೇಕು ಎಂದು ಷರತ್ತು ಹಾಕಿತ್ತು. ಈ ಹಿನ್ನೆಲೆ ಸೋಮವಾರ ಹಲವು ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶವೂ ವ್ಯಕ್ತವಾಗಿತ್ತು. ಈ ಹಿನ್ನೆಲೆ ಪೊಲೀಸ್ ಮಹಾನಿರ್ದೇಶಕರು ಈ ಕುರಿತು ಟ್ವೀಟ್ ಮಾಡಿದ್ದಾರೆ.
To buy groceries,vegetables and daily needs there is NO BAR for using vehicle to yr neighbour hood shop in cities or nearest availability point in rural areas. Use this facility with discretion & not as a licence for free run everyday. Stay at home for your own safety.
— DGP KARNATAKA (@DgpKarnataka) May 10, 2021