Wednesday, August 17, 2022

Latest Posts

ಭೂಮಿಯೊಳಗಿಂದ ಭಾರೀ ಶಬ್ದ ಕೇಳಿ ಮನೆಯಿಂದ ಹೊರಗೋಡಿ ಬಂದ ಗ್ರಾಮಸ್ಥರು!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರಿ ಶಬ್ದ ಕೇಳಿಬಂದಿದ್ದರಿಂದ ಬೆಚ್ಚಿದ ಜನರು ಮನೆಯಿಂದ ಹೊರಗೋಡಿ ಬಂದ ಘಟನೆ ನಡೆದಿದೆ.
ರಾತ್ರಿ 8.20ರ ಸುಮಾರಿಗೆ ಈ ಜೋರಾದ ಸದ್ದು ಕೇಳಿಸಿದ್ದು, ಜನರಿಗೆ ಭೂಮಿ ಕಂಪಿಸಿದಂಥ ಅನುಭವವೂ ಆಗಿದೆ.ಶಬ್ದದ ಬೆನ್ನಿಗೇ ಭೂಮಿಯೂ ಕಂಪಿಸಿದ್ದರಿಂದ ಮನೆಯಲ್ಲಿದ್ದ ಪಾತ್ರೆಗಳೆಲ್ಲ ಅಲುಗಾಡಿ ಕೆಳಗುರುಳಿವೆ ಎಂದು ಜನರು ತಿಳಿಸಿದ್ದಾರೆ.
ಬಾಂಬ್​ ಬ್ಲಾಸ್ಟ್​ ಆದ ರೀತಿಯಲ್ಲಿ ಶಬ್ದ ಕೇಳಿಬಂದಿದೆ. ಜನರೆಲ್ಲ ಆತಂಕದಲ್ಲಿದ್ದಾರೆ. ಅದರಲ್ಲೂ ಈ ಗಡಿಕೇಶ್ವರ ಗ್ರಾಮದಲ್ಲಿ ಫೆ. 21ರಂದು ಮೂರು ಸಲ ಇಂಥದ್ದೇ ಶಬ್ದ ಕೇಳಿಬಂದಿದ್ದು, ಇದೀಗ ಮತ್ತೆ ಶಬ್ದ ಮರುಕಳಿಸಿದ್ದು, ಸ್ಥಳೀಯರು ಈ ರಾತ್ರಿಯನ್ನು ಆತಂಕದಲ್ಲೇ ಕಳೆಯುವಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!