Tuesday, July 5, 2022

Latest Posts

ದ. ಆಫ್ರಿಕಾ ಏಕದಿನ ಸರಣಿಯಿಂದ ವಿರಾಟ್ ಕೋಹ್ಲಿ ಹೊರಕ್ಕೆ: ಕಾರಣ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ಅಂತಾರಾಷ್ಟ್ರೀಯ ಸರಣಿಯಿಂದ ವಿರಾಟ್ ಕೋಹ್ಲಿ ಹೊರಗುಳಿಯಲು ನಿರ್ಧರಿಸಿದ್ದಾರೆ.
ಕಳೆದೊಂದು ವಾರದಿಂದ ಭಾರತ ಕ್ರಿಕೆಟ್ ತಂಡದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿವೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡವನ್ನು ಆಯ್ಕೆ ಮಾಡುವಾಗ ತೆಗೆದುಕೊಂಡ ಕೆಲ ನಿರ್ಧಾರಗಳು ಕೆಲವರ ಮನಸ್ಥಾಪಕ್ಕೆ ಕಾರಣವಾಗಿದೆ.

ಮೊದಲಿಗೆ ಕೋಹ್ಲಿ ಕೆಳಗಿಳಿಸಿ, ರೋಹಿತ್‌ಗೆ ಕ್ಯಾಪ್ಟನ್ ಪಟ್ಟ ನೀಡಲಾಯಿತು. ಆದರೆ ರೋಹಿತ್ ಶರ್ಮಾ ಇಂಜುರಿ ಕಾರಣದಿಂದ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಹಿಂದೆ ಸರಿದಿದ್ದಾರೆ.
ಉತ್ತಮ ದಾಖಲೆ ಹೊಂದಿದ್ದರೂ ತನ್ನನ್ನು ಕೆಳಗಿಳಿಸಿದ ಬೇಸರ ವಿರಾಟ್‌ಗೆ ಇದ್ದಂತಿದೆ. ಇದರ ಬೆನ್ನಲ್ಲೇ ವಿರಾಟ್ ತಂಡಕ್ಕೆ ಶಾಕ್ ನೀಡಿದ್ದು, ಸರಣಿಯಿಂದ ಹೊರಗುಳಿದಿದ್ದಾರೆ.

ಇನ್‌ಸೈಡ್ ಸ್ಪೋರ್ಟ್ಸ್ ವರದಿ ಅನ್ವಯ ಕೋಹ್ಲಿ ಏಕದಿನ ಸರಣಿಗೆ ಲಭ್ಯವಿರುವುದಿಲ್ಲ ಎಂದು ಹೇಳಿರುವ ಮಾಹಿತಿ ದೊರಕಿದೆ. ಮಗಳು ವಮಿಕಾಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಮಿಸ್ ಮಾಡಲು ಆಗುವುದಿಲ್ಲ ಇದೇ ಕಾರಣಕ್ಕೆ ಸರಣಿಯಲ್ಲಿ ಪಾಲ್ಗೊಳ್ಳಲು ಆಗುತ್ತಿಲ್ಲ ಎಂದು ಕೋಹ್ಲಿ ಹೇಳಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ ನೀಡಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss