‘ಮಂಡೌಸ್’ ಚಂಡಮಾರುತದ ಅಬ್ಬರಕ್ಕೆ ಧ್ವಂಸಗೊಂಡಿತು ಮರೀನಾ ಬೀಚ್ ನ ನಡಿಗೆ ಸೇತುವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

‘ಮಂಡೌಸ್’ ಚಂಡಮಾರುತದ ಅಬ್ಬರಕ್ಕೆ ತಮಿಳುನಾಡು ತತ್ತರಿಸಿ ಹೋಗುತ್ತಿದ್ದು, ಇಲ್ಲಿನ ಮರೀನಾ ಬೀಚ್ ನಲ್ಲಿ ವಿಶೇಷ ಚೇತನರಿಗಾಗಿ ನಿರ್ಮಾಣ ಮಾಡಿದ್ದ ನಡಿಗೆ ಸೇತುವೆ ಧ್ವಂಸಗೊಂಡಿದೆ.

ಚೆನ್ನೈನ ಮರೀನಾ ಬೀಚ್ ನಲ್ಲಿ ವಿಕಲಚೇತನರು ಸಮುದ್ರದ ಅಲೆಗಳನ್ನು ವೀಕ್ಷಿಸಲು ಈ ವಿಶಿಷ್ಠ ಸೇತುವೆ ನಿರ್ಮಿಸಲಾಗಿತ್ತು. ಶಾಶ್ವತ ಮರದ ಬೋರ್ಡ್ವಾಕ್ ಅನ್ನು ಶಾಸಕ ಉದಯನಿಧಿ ಸ್ಟಾಲಿನ್ ಅವರು ಉದ್ಘಾಟಿಸಿದ್ದರು.

ಇದು ಭಾರತದಲ್ಲಿ ಮೊದಲ ಬಾರಿಗೆ, ವಿಕಲಚೇತನರು ಸಮುದ್ರದ ಬಳಿ ಹೋಗಲು ಅನುವು ಮಾಡಿಕೊಡಲು ತಮಿಳುನಾಡಿನಲ್ಲಿ ಈ ರೀತಿಯ ಮರದ ನಡಿಗೆ ಸೇತುವೆಯನ್ನು ನಿರ್ಮಿಸಲಾಗಿತ್ತು.

ಆದರೆ ಇದೀಗ ಮಂಡೌಸ್ ಚಂಡಮಾರುತದಿಂದಾಗಿ ಸೃಷ್ಟಿಯಾಗಿರುವ ಬೃಹತ್ ಸಮುದ್ರದ ಅಲೆಗಳ ಅಬ್ಬರಕ್ಕೆ ವಿಶೇಷ ಸೇತುವೆ ಹಾಳಾಗಿದೆ.

ಈ ವೇಳೆ ಚೆನ್ನೈ ಕಾರ್ಪೋರೇಷನ್ ಮೇಯರ್ ಪ್ರಿಯಾ ಅವರು ಮಂಡೂಸ್ ಚಂಡಮಾರುತದಿಂದ ಹಾನಿಗೀಡಾದ ಅಂಗವಿಕಲರ ವಿಶೇಷ ರಸ್ತೆಯನ್ನು ಶೀಘ್ರವೇ ದುರಸ್ತಿಗೊಳಿಸಲಾಗುವುದು ಮತ್ತು ತನಿಖೆ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!