ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಸೆಮಿಫೈನಲ್ ನಲ್ಲಿ ರೋಚಕ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದ ಭವಿನಾ ಪಟೇಲ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಭಿನಂದಿಸಿದ್ದಾರೆ.
ಭವಿನಾ ಪಟೇಲ್ ತಮ್ಮ ಚೀನಾ ಎದುರಾಳಿಯನ್ನು 3-2 ರಲ್ಲಿ ಮಣಿಸಿ ಪ್ಯಾರಾಲಿಂಪಿಕ್ಸ್ನ ಫೈನಲ್ ತಲುಪಿದ ದೇಶದ ಮೊದಲ ಟೇಬಲ್ ಟೆನಿಸ್ ಆಟಗಾರ್ತಿಯಾಗಿದ್ದಾರೆ.
“ಅಭಿನಂದನೆಗಳು ಭವಿನಾ ಪಟೇಲ್! ನೀವು ಅದ್ಭುತವಾಗಿ ಆಡಿದ್ದೀರಿ. ನಿಮ್ಮ ಯಶಸ್ಸಿಗೆ ಇಡೀ ದೇಶ ಪ್ರಾರ್ಥಿಸುತ್ತಿದೆ. ಯಾವುದೇ ಒತ್ತಡವಿಲ್ಲದೆ ಆಟವಾಡಿ. ಅತ್ಯುತ್ತಮವಾದದ್ದನ್ನು ದೇಶಕ್ಕೆ ನೀಡಿದ್ದೀರಿ. ನಿಮ್ಮ ಸಾಧನೆ ಇಡೀ ದೇಶಕ್ಕೆ ಸ್ಫೂರ್ತಿ ನೀಡುತ್ತದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಮಹಿಳಾ ಟೇಬಲ್ ಟೆನ್ನಿಸ್ ಸಿಂಗಲ್ಸ್ನಲ್ಲಿ ಚೀನಾದ ಮಿಯಾವೋ ಝಾಂಗ್ ಅವರನ್ನು ಮಣಿಸಿ ಭಾರತೀಯ ಪ್ಯಾರಾ ಟೇಬಲ್ ಟೆನ್ನಿಸ್ ಆಟಗಾರ್ತಿ ಭವಿನಾ ಪಟೇಲ್ ಫೈನಲ್ಗೆ ಪ್ರವೇಶ ಪಡೆದಿದ್ದಾರೆ. ಆ ಮೂಲಕ ಚಿನ್ನದ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
Congratulations Bhavina Patel! You played excellently.
The entire nation is praying for your success and will be cheering for you tomorrow. Give your best and play without any pressure. Your accomplishments inspire the entire nation. #Paralympics
— Narendra Modi (@narendramodi) August 28, 2021