spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

“ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ, ಅಭಿಮಾನದಲ್ಲಿ ತೇಲಿಸುತ್ತಿದೆ”

- Advertisement -Nitte

ಹೊಸ ದಿಗಂತ ಡಿಟಿಟಲ್‌ ಡೆಸ್ಕ್:‌

ಹಿರಿಯ ಸಂಗೀತ ನಿರ್ದೇಶಕ ಡಾ. ಹಂಸಲೇಖ ಆರೋಗ್ಯದ ಕುರಿತು ಇದೀಗ ವದಂತಿಗಳು ಹಬ್ಬುತ್ತಿದ್ದು, ಇವೆಲ್ಲದಕ್ಕೂ ಅವರೇ ಪತ್ರ ಸ್ಪಷ್ಟೀಕರಣ ನೀಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಆರೋಗ್ಯದ ಕುರಿತು ಪತ್ರ ಬರೆದು ಪೋಸ್ಟ್ ಮಾಡಿರುವ ಅವರು,

“ಪೂಜ್ಯ ಕರ್ನಾಟಕವೇ, ಸಮಸ್ಕಾರ… ನಾನು ಆರೋಗ್ಯದಿಂದ ಇದ್ದೇನೆ. ನಾನು ಅನಾರೋಗ್ಯಕ್ಕೀಡಾಗಿದ್ದೇನೆ ಎಂದು ಹಲವು ಕರೆಗಳು ಬರುತ್ತಿವೆ. ಎಲ್ಲರೂ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ನನಗೆ ಗೊತ್ತು, ನಿಮ್ಮ ಪ್ರೀತಿ ಎಷ್ಟು ವಿಶಾಲವಾಗಿದೆ ಎಂದು.. ಈ ಪ್ರೀತಿಗಾಗಿ ನಾನು ತುಂಬಾ ಸವೆದಿದ್ದೀನಿ, ಸಹಿಸಿದ್ದೀನಿ. ಅದರ ಸುಖವನ್ನು ಈಗ ನಾನು ಅನುಭವಿಸುತ್ತಿದ್ದೇನೆ.

ನಾನು ಕೇಳದೆಯೇ ಸರ್ಕಾರ ನನ್ನ ಮನೆಗೆ ಭದ್ರತೆ ಕೊಟ್ಟಿದೆ. ನಾನು ಕೇಳದೆಯೇ ಕರ್ನಾಟಕದ ಲಕ್ಷಾಂತರ ಅಭಿಮಾನಿಗಳು ನನ್ನ ಪರವಾಗಿ ಮಾತನಾಡುತ್ತಿದ್ದಾರೆ. ನನ್ನ ಉದ್ಯಮದ ಆತ್ಮೀಯರು ನನಗೆ ಧೈರ್ಯ ತೋರುತ್ತಿದ್ದಾರೆ.

ಇಡೀ ಕರ್ನಾಟಕವೇ ನನ್ನನ್ನು ಪ್ರೀತಿಯಲ್ಲಿ ಮುಳುಗಿಸಿ ಅಭಿಮಾನದಲ್ಲಿ ತೇಲಿಸುತ್ತಿದೆ. ಅಭಿಮಾನ ಆವೇಶವಾಗಬಾರದು. ಆವೇಶ ಅವಘಡಕ್ಕೆ ಕಾರಣವಾಗಬಹುದು. ಅಭಿಮಾನ ಹಾಡಿನಂತಿರಬೇಕು. ಹಾಡು ಕೇಳಿಸುತ್ತದೆ… ಮುಟ್ತಿಸುತ್ತದೆ…. ನಿಮ್ಮ ಪ್ರೀತಿ ನನಗೆ ತಲುಪಿದೆ. ಹೃದಯ ತುಂಬಿ ನಮಸ್ಕಾರಗಳು” ಎಂದು ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss