ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೋನ್ ಬಳಸೋಕೆ ಬಿಡದ ಪತಿಗೆ ಪತ್ನಿ ಚಿತ್ರಹಿಂಸೆ ನೀಡಿದ್ದಾಳೆ. ಪತಿಗೆ ನಿದ್ರೆ ಮಾತ್ರೆ ನೀಡಿ, ಆತನ ಕೈಕಾಲನ್ನು ಮಂಚಕ್ಕೆ ಕಟ್ಟಿ ಥಳಿಸಿದ್ದು ಮಾತ್ರವಲ್ಲದೆ, ಆತನಿಗೆ ಕರೆಂಟ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿದ್ದಾಳೆ.
ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಈ ಶಾಕಿಂಗ್ ಘಟನೆ ನಡೆದಿದ್ದು, 33 ವರ್ಷದ ಮಹಿಳೆಯೊಬ್ಬಳು ತನ್ನ ಫೋನ್ ಕಿತ್ತುಕೊಂಡ ಪತಿರಾಯನಿಗೆ ಕರೆಂಟ್ ಶಾಕ್ ನೀಡಿದ್ದಾಳೆ. ಆಕೆ ಮೊದಲು ಪತಿಗೆ ನಿದ್ರೆ ಮಾತ್ರೆ ನೀಡಿ ಆತನನ್ನು ಮಂಚಕ್ಕೆ ಕಟ್ಟಿ ಹಾಕಿ ಚೆನ್ನಾಗಿ ಥಳಿಸಿ ನಂತರ ಕರೆಂಟ್ ಶಾಕ್ ನೀಡಿದ್ದಾಳೆ. ತಂದೆಯ ರಕ್ಷಣೆಗಾಗಿ ಹೋದಂತಹ 14 ವರ್ಷದ ಮಗನಿಗೂ ಆಕೆ ಮನಬಂದಂತೆ ಥಳಿಸಿದ್ದಾಳೆ.
ಪ್ರದೀಪ್ ಸಿಂಗ್ ಸೈಫೈ -ಬೇಬಿ ಯಾದವ್ ದಂಪತಿ, ಬೇಬಿ ಹೆಚ್ಚು ಸಮಯ ಮೊಬೈಲ್‌ನಲ್ಲಿಯೇ ಟೈಮ್‌ಪಾಸ್ ಮಾಡುವುದನ್ನು ಗಮನಿಸಿದ ಪ್ರದೀಪ್ ಆಕೆಗೆ ವಾರ್ನಿಂಗ್ ನೀಡಿದ್ದಾನೆ. ರಾತ್ರಿ ವೇಳೆ ಆಕೆ ಫೋನ್‌ನಲ್ಲಿ ಮಾತನಾಡುತ್ತಿರುವುದನ್ನು ಕಂಡ ಪತಿ ಫೋನ್ ಕಸಿದುಕೊಂಡಿದ್ದಾನೆ. ಇದರಿಂದ ಪತ್ನಿ ಕಿರಾತಕ ಕೆಲಸ ಮಾಡಿದ್ದಾಳೆ.