ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪತಿ ಆಫೀಸ್ ಮುಗಿಸಿ ಮನೆಗೆ ಬಂದಾಗ ಪತ್ನಿ ಈ ರೀತಿ ಟ್ರೀಟ್ ಮಾಡಿದರೆ ಪ್ರೀತಿ ಡಬ್ಬಲ್ ಆಗತ್ತಂತೆ!

ಕೆಲವು ಪತ್ನಯರಿಗೆ ಹೊರಗಡೆ ದುಡಿದು ದಣಿದು ಬರುವ ಪತಿಯನ್ನು ಹೇಗೆ ಟ್ರೀಟ್ ಮಾಡಬೇಕು ಎಂಬುದೇ ಗೊತ್ತಿರುವುದಿಲ್ಲ. ಹೇಗೇಗೋ ವರ್ತಿಸಿ ಸಂಬಂಧ ಹಾಳು ಮಾಡಿಕೊಳ್ಳುತ್ತಾರೆ. ಹೊರಗಿನ ಕೆಲಸದ ತಲೆಬಿಸಿಯಲ್ಲಿ ಮನೆಗೆ ಬಂದವರಿಗೆ‌ ಸರಿಯಾಗಿ ಟ್ರೀಟ್ ಮಾಡದಿದ್ದರೆ ಆಯಾಸ ಸಿಟ್ಟಿನ ರೂಪ ಪಡೆಯುತ್ತದೆ. ದಿನವಿಡೀ ಇಬ್ಬರ ಮನಸ್ಸು ಹಾಳಾಗುತ್ತದೆ. ಗಂಡ ಕೆಲಸ ಮುಗಿಸಿ ಮನೆಗೆ‌ ಬಂದ ಮೇಲೆ ಸಂತೋಷದಿಂದ‌ ಇರಬೇಕೆಂದರೆ ಅವರೊಟ್ಟಿಗೆ ಹೀಗೆ ನಡೆದುಕೊಳ್ಳಿ. ನಿಮ್ಮ ಮೇಲಿರುವ ಪ್ರೀತಿ ಡಬ್ಬಲ್ ಆಗುತ್ತದೆ!

 • ಕಂಪ್ಲೆಂಟ್ ಬಾಕ್ಸ್ ಆಗಬೇಡಿ!
  ಆಫೀಸ್ ಇಂದ ಮನೆಗೆ ಬಂದ ತಕ್ಷಣ ನೆಗೆಟಿವ್ ವಿಷಯದ ಬಗ್ಗೆ ಮಾತನಾಡಬೇಡಿ. ಮಿಕ್ಸಿ ಹಾಳಾಗಿದೆ, ಪಕ್ಕದ ಮನೆಯವರು ಜಗಳ ಮಾಡಿದ್ರು, ಸಂಬಂಧಿಕರು ಹಾಗಂದರೂ ಹೀಗಂದರೂ ಎಂದು. ಆಫೀಸ್ ನಲ್ಲಿ ಸಿಡುಕು ಮುಖದ ಬಾಸ್ ನೋಡಿ ಮೊದಲೆ ತಲೆಕೆಟ್ಟು ಹೋಗಿರುತ್ತದೆ. ಮನೆಯಲ್ಲೂ‌ ನೆಮ್ಮದಿ ಸಿಗುವ ಮಾತುಗಳಿಲ್ಲದಿದ್ದರೆ ಮತ್ತಷ್ಟು ಕೋಪ ಹೆಚ್ಚುತ್ತದೆ. ಸಂತೋಷದ ವಿಷಯಗಳಿದ್ದರೆ ಮಾತ್ರ ಹಂಚಿಕೊಳ್ಳಿ.

 • ಜೀವ ಸ್ಪರ್ಶ..
  ಮದುವೆ ಶುರುವಿನಲ್ಲಿ ಇರುವ ಪ್ರೀತಿ, ಹೊಂದಾಣಿಕೆ ನಿಧಾನಕ್ಕೆ ಕಡಿಮೆ ಆಗಿ ಹೋಗುತ್ತದೆ. ದಾಂಪತ್ಯಕ್ಕೆ ವಯಸ್ಸಾಗುವುದಿಲ್ಲ ನೆನಪಿರಲಿ. ಗಂಡ ಕೆಲಸ ಮುಗಿಸಿ ಮನೆಗೆ ಬಂದ ತಕ್ಷಣವೇ ಅವರನ್ನು ನಗು ಮುಖದಲ್ಲಿ ಬರಮಾಡಿಕೊಳ್ಳಿ, ಅಂಗೈ ಹಿಡಿದು ಒಂದೆರಡು ಮಾತನಾಡಿ, ನಿಮ್ಮ ಸ್ಪರ್ಶ ಜೀವ ಸ್ಪರ್ಶವಾಗಿರುತ್ತದೆ. ಮನಸ್ಸಿಗೆ ನೆಮ್ಮದಿ ‌ಎನಿಸುತ್ತದೆ.

 • ಮಕ್ಕಳ‌ ದೂರು ಬೇಡ…
  ಮನೆಗೆ ಕಾಲಿಡುತ್ತಿದ್ದಂತೆಯೇ ಕೆಲ‌ ಪತ್ನಿಯರು ಮಕ್ಕಳ ಬಗ್ಗೆ ಕಂಪ್ಲೆಂಟ್ ಮಾಡಲು ಪ್ರಾರಂಭಿಸುತ್ತಾರೆ. ನಿಮ್ಮ ಮಗ/ ಮಗಳು ಹೇಳಿದ ಒಂದೂ ಮಾತು ಕೇಳಲ್ಲ, ಹೋಮ್ ವರ್ಕ್ ಮಾಡಿಲ್ಲ, ಕಡಿಮೆ ಮಾರ್ಕ್ಸ್ ಬಂದಿದೆ‌ ಹೀಗೆ ಒಂದಲ್ಲಾ ಒಂದು ಕಂಪ್ಲೆಂಟ್ ಹೇಳುತ್ತಾರೆ. ಪ್ರತಿ ತಂದೆಗೂ  ಕೆಲಸದ ಒತ್ತಡ ಎಷ್ಟೇ ಇದ್ದರೂ ಮನೆಯಲ್ಲಿ ಮಕ್ಕಳನ್ನು ನೋಡುತ್ತಿದ್ದ ಹಾಗೆ ಒತ್ತಡದ ಭಾರ ಕಡಿಮೆ ಆಗುತ್ತದೆ. ನೀವು ಆ ರೀತಿ‌ ಮಕ್ಕಳ‌ ಬಗ್ಗೆ‌ ಹೇಳಿದರೆ ಮತ್ತಷ್ಟು ಟ್ರೆಸ್ ಜಾಸ್ತಿ ಆಗುತ್ತದೆ. ಮಕ್ಕಳನ್ನು ಮುದ್ದು ಮಾಡುವ ಬದಲು ಬೈಯುತ್ತಾರೆ. ಗಂಡನ ಮೂಡ್ ಹಾಳಾಗುತ್ತದೆ.

 • ರುಚಿಯಾದ ತಿಂಡಿ:
  ಕೆಲಸ ಮುಗಿಸಿ ಬಂದಿದ್ದೆ ಅವರನ್ನು ಚೆನ್ನಾಗಿ ವಿಚಾರಿಸಿಕೊಳ್ಳಿ. ಹಸಿವಾಗಿರುತ್ತದೆ, ಅವರಿಗೆ ಇಷ್ಟವಾಗುವಂತಹ ತಿಂಡಿ ಮಾಡಿಕೊಡಿ. ಗಂಡಂದಿರನ್ನೂ ನಳಪಾಕದಿಂದಲೂ ಸೆಳೆಯಬಹುದು ನೆನಪಿರಲಿ.

 • ಹೇಗಿತ್ತು ರೀ.. ಇವತ್ತಿನ ದಿನ?
  ಪತಿಯ ಕೆಲಸದ ಬಗ್ಗೆ ಒಂದು‌ ದಿನವಾದರೂ ಕೇಳಿದ್ದೀರಾ? ಹೇಗಿ ನೆಡೆಯುತ್ತಿದೆ ಕೆಲಸ? ವರ್ಕ್ ತುಂಬಾ ಇದೆಯೇ? ಏನಾದರ ಹೆಲ್ಪ್ ನನ್ನಿಂದ ಬೇಕಾ ಹೀಗೆ… ದಿನವೂ ಅವರ ಕೆಲಸದ ಬಗ್ಗೆ ವಿಚಾರಿಸಿ. ನೀವು ಅವರ ಜೊತೆ ಇದ್ದೀರಾ ಎಂಬ ಧೈರ್ಯ ಅವರಲ್ಲಿ ಬರಲಿ.

 •  ಹೆಡ್ ಮಸಾಜ್:
  ಕೊಬ್ಬರಿ ಎಣ್ಣೆ, ಲಿಂಬು ರಸ ಮಿಕ್ಸ್ ಮಾಡಿ ಹಿತವಾದ ಹೆಡ್ ಮಸಾಜ್ ಮಾಡಿಕೊಡಿ. ಮೈಂಡ್ ಫ್ರೀಯಾಗುತ್ತದೆ. ಕೆಲಸದ ಸುಸ್ತು ಕಡಿಮೆ ಆಗುತ್ತದೆ. ನಿಮ್ಮಿಬ್ಬರ ಮಧ್ಯೆ‌ ಹೊಂದಾಣಿಕೆ ಹೆಚ್ಚುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss