ನೀನು ಕಪ್ಪಗಿದ್ದೀಯ, ಕುರೂಪಿ ಎಂದು ದಿನವೂ ಹೇಳುತ್ತಿದ್ದ ಗಂಡನನ್ನು ಕೊಂದ ಪತ್ನಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಲ ಎಷ್ಟೇ ಮುಂದುವರಿದರೂ ನನಗೆ ಬೆಳ್ಳಗಿರೋ ಹೆಂಡತಿಯೇ ಬೇಕು ಅನ್ನೋ ಗಂಡಸರು ಈಗಲೂ ಇದ್ದಾರೆ. ಇನ್ನು ಯಾವ್ಯಾವುದೋ ಕಾರಣಕ್ಕೆ ಕಪ್ಪಗಿನ ಹುಡುಗಿಯನ್ನು ಮದುವೆಯಾದರೆ ಕಪ್ಪು, ಕುರೂಪಿ ಎಂದು ಹೀಯಾಳಿಸುವವರೂ ಇದ್ದಾರೆ. ಇದೇ ರೀತಿ ಪ್ರತಿದಿನ ಗಂಡನ ಮಾತು ಕೇಳಿ ಕೇಳಿ ರೋಸಿ ಹೋಗಿದ್ದ ಪತ್ನಿ ಗಂಡನನ್ನೇ ಕೊಲೆ ಮಾಡಿದ್ದಾಳೆ.

ಚತ್ತೀಸ್‌ಗಢದ ಅಮ್ಲೇಶ್ವರ್ ಗ್ರಾಮದ ಸಂಗೀತಾ ಸೋನ್ವಾನಿ ತನ್ನ ಪತಿ ಅನಂತ್ ಸೋನ್ವಾನಿಯನ್ನು ಕೊಡಲಿಯಿಂದ ಹಲ್ಲೆ ನಡೆಸಿ ಕೊಂದಿದ್ದಾಳೆ. ಸಂಗೀತಾಳನ್ನು ಪೊಲೀಸರು ಬಂಧಿಸಿದ್ದಾರೆ.

ನೋಡೋಕೆ ಚೆನ್ನಾಗಿಲ್ಲ, ಮೈ ಬಣ್ಣ ಕಪ್ಪು ಎಂದು ದಿನವೂ ಅನಂತ್ ಹೀಯಾಳಿಸುತ್ತಿದ್ದ, ಹೀಗಾಗಿ ಆಕೆ ಕೋಪದಲ್ಲಿ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ, ನಂತರ ಎಲ್ಲೆಡೆ ಹಲ್ಲೆ ಮಾಡಿ ಸಾಯಿಸಿದ್ದಾಳೆ. ಎಲ್ಲರಿಗೂ ಯಾರೋ ಬಂದು ನನ್ನ ಗಂಡನನ್ನು ಕೊಂದಿದ್ದಾರೆ ಎಂದು ಹೇಳಿದ್ದಾಳೆ. ತದನಂತರ ಪೊಲೀಸ್ ಠಾಣೆಯಲ್ಲಿ ನಿಜ ಒಪ್ಪಿಕೊಂಡಿದ್ದಾಳೆ. ತನಿಖೆ ಜಾರಿಯಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!