Sunday, August 14, 2022

Latest Posts

ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಪತಿ

ಹೊಸದಿಗಂತ ವರದಿ, ಕಲಬುರಗಿ:

ಮಗುವಿಗೆ ಹಾಲುಣಿಸುವಾಗ ಪತ್ನಿಯನ್ನು ಪತಿಯೊಬ್ಬ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ನಗರದ ರಾಘವೇಂದ್ರ ಕಾಲೋನಿಯಲ್ಲಿ ನಡೆದಿದೆ‌.
ನಸೀಮಾ ಬೇಗಂ (35) ಕೊಲೆಯಾದ ಮಹಿಳೆ. ಆಕೆಯ ಪತಿ ಇಬ್ರಾಹಿಂ ದುಷ್ಕೃತ್ಯ ಎಸಗಿರುವ ಆರೋಪಿ ಎಂದು ತಿಳಿದು ಬಂದಿದೆ.
ಕುಡಿತಕ್ಕೆ ದಾಸನಾಗಿದ್ದ ಇಬ್ರಾಹಿಂ ಪತ್ನಿ ನಸೀಮಾ,ಗೆ ಕಿರುಕುಳ ನೀಡುತ್ತಿದ್ದನು. ತವರು ಮನೆಯಿಂದ ಮದ್ಯ ಕುಡಿಯುವುದಕ್ಕೆ ಹಣ ತರುವಂತೆ ಪೀಡಿಸುತ್ತಿದ್ದನು.
ನಸೀಮಾ ಬೇಗಂ ತವರು ಮನೆಯಿಂದ ಹಣ ತರದ ಹಿನ್ನೆಲೆ ಇಬ್ರಾಹಿಂ ಆಕೆ ಮೇಲೆ ಕೋಪಗೊಂಡಿದ್ದನು. ಮಗುವಿಗೆ ಹಾಲುಣಿಸುತ್ತಿರುವಾಗ ಇಬ್ರಾಹಿಂನು ಮಾರಕಾಸ್ತ್ರದಿಂದ ನಸೀಮಾ ಕತ್ತುಸೀಳಿ ಕೊಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಪೊಲೀಸರಿಗೆ ತಿಳಿದಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಳಿಕ ಆರೋಪಿ ಇಬ್ರಾಹಿಂನನ್ನ ಪೊಲೀಸರು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.
ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss