ಕುಡಿಯೋಕೆ ದುಡ್ಡು ಕೊಡದ ಪಕ್ಕದ ಮನೆ ಮಹಿಳೆ ಹತ್ಯೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ಡೊಂಬಿವಿಲಿ ಪ್ರದೇಶದಲ್ಲಿ ಮದ್ಯ ಖರೀದಿಸಲು ಹಣ ಕೊಡದ ಪಕ್ಕದ ಮನೆಯ ಮಹಿಳೆಯನ್ನು ವ್ಯಕ್ತಿಯೊಬ್ಬ ಕೊಂದಿದ್ದಾನೆ.

ನೆರೆ ಮನೆಯವರಾದ ವೈಶಾಲಿ ಮಸೂದ್ ಬಳಿ ಆರೋಪಿ ಸಾಕಷ್ಟು ಬಾರಿ ಹಣ ಪಡೆದಿದ್ದ. ಈ ಬಾರಿ ಹಣ ಕೇಳಿದಾಗ ವೈಶಾಲಿ ನಿರಾಕರಿಸಿದ್ದು, ಸಿಟ್ಟಿನಲ್ಲಿ ಆತ ಚಾಕುವಿನಿಂದ ಇರಿದು ವೈಶಾಲಿ ಹತ್ಯೆ ಮಾಡಿದ್ದಾನೆ.

ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾನ್ಪಾಡಾ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!