Monday, August 15, 2022

Latest Posts

ಇಡೀ ಕುಟುಂಬಕ್ಕೆ ವಿಷವುಣಿಸಿ ಪ್ರಿಯಕರನೊಂದಿಗೆ ಓಡಿ ಹೋದ ಖತರ್ನಾಕ್ ಮಹಿಳೆ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಬ್ಬರು ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ವಿಷವುಣಿಸಿ, ಖತರ್ನಾಕ್ ಮಹಿಳೆ ಪ್ರಿಯಕರನೊಂದಿಗೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಭಿಂದ್​ ಜಿಲ್ಲೆಯಲ್ಲಿ ನಡೆದಿದೆ.

ಮಕ್ಕಳು, ಪತಿ, ಅತ್ತೆ-ಮಾವ, ಮೈದುನ, ಅತ್ತಿಗೆ ಸೇರಿದಂತೆ ಒಂದೇ ಕುಟುಂಬ 12ಕ್ಕೂ ಹೆಚ್ಚು ಮಂದಿಗೆ ಆರೋಪಿ ಮಹಿಳೆ ವಿಷ ಉಣಿಸಿದ್ದಾಳೆ. ಇವರೆಲ್ಲರ ಸ್ಥಿತಿ ಗಂಭೀರವಾಗಿದ್ದು, ಗ್ವಾಲಿಯರ್​ನ ಜಯ ಆರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ಮಹಿಳೆಯ ಪತಿ ಮೃತಪಟ್ಟ ಮೇಲೆ ಪತಿ ಕಿರಿಯ ಸಹೋದರ ಛೋಟು ಖಾನ್​ನನ್ನು  ಮದುವೆ ಆಗಿದ್ದಳು. ಆದರೆ, ಮಹಿಳೆ ಛೋಟು ಖಾನ್ ಸೋದರ ಮಾವ ಲೋಖನ್​ ಖಾನ್​ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದು ಕುಟುಂಬದಲ್ಲಿ ಗಲಾಟೆ ನಡೆದಿತ್ತು. ಹಾಗಾಗಿ ಆಹಾರದಲ್ಲಿ ವಿಷ ಬೆರೆಸಿಟ್ಟು ಮಹಿಳೆ ಲೋಖನ್​ ಖಾನ್​ ಜೊತೆ ಓಡಿ ಹೋಗಿದ್ದಾಳೆ.

ಬಾರಾಸನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯ ಮೇಲೆ ಎಫ್​ಐಆರ್​ ದಾಖಲಾಗಿದೆ. ಮಹಿಳೆಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss