spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ಯಾರಾಲಂಪಿಯನ್ ದೇವೇಂದ್ರರ ಮಾತು ನಿಮ್ಮ ಕಣ್ಣಲ್ಲಿ ನೀರು ಜಿನುಗಿಸೀತು…

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಪ್ಯಾರಾಲಿಂಪಿಕ್ಸ್ ನಲ್ಲಿ ದಾಖಲೆಯ ಸಾಧನೆ ಮಾಡಿ ಬಂದ ಭಾರತೀಯ ಪಟುಗಳ ಜತೆ ಸಂತೋಷಕೂಟ ಇರಿಸಿಕೊಂಡಿದ್ದರು. ಪ್ರಧಾನಿಯವರೊಂದಿಗೆ ಬೆರೆತು ಕ್ರೀಡಾಪಟುಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಈ ಬಾರಿ ಭರ್ಚಿ ಎಸೆತದಲ್ಲಿ ಬೆಳ್ಳಿ ಪದಕ ವಿಜೇತ ದೇವೇಂದ್ರ ಜಜರಿಯಾ ಆಡಿದ ಮಾತುಗಳು ಬದಲಾಗುತ್ತಿರುವ ಭಾರತದ ಚಹರೆಗೆ ಕನ್ನಡಿ ಹಿಡಿದಂತಿದ್ದವು. ಈ ಮೊದಲು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಕ್ಕೆ ಎಷ್ಟು ಕಷ್ಟವಿತ್ತು ಹಾಗೂ ಸರ್ಕಾರ ಈ ಬಾರಿ ಹೇಗೆ ಎಲ್ಲ ವ್ಯವಸ್ಥೆಗಳನ್ನೂ ಒದಗಿಸಿದೆ ಎಂಬುದನ್ನು ಅವರು ವಿವರಿಸಿದ್ದು ಹೀಗೆ.

“ನಾನು ಪ್ಯಾರಾಲಂಪಿಕ್ಸ್ ನಲ್ಲಿ ತುಂಬಾ ವರ್ಷಗಳಿಂದ ಭಾಗವಹಿಸುತ್ತಿದ್ದೇನೆ. 2004ನಲ್ಲಿ ಪ್ಯಾರಾಲಂಪಿಕ್ಸ್ ಹೋಗುವಾಗ ನನ್ನ ಕೈ ಯಿಂದ ಹಣ ಹಾಕಿಕೊಂಡು ಹೋಗಿದ್ದೆ. ಆ ಹಣ ಹೊಂದಿಸಲು ಎಷ್ಟು ಕಷ್ಟ ಪಟ್ಟಿದ್ದೇನೆಂಬುದು ನನಗೆ ಮಾತ್ರ ಗೊತ್ತು. ಅಮ್ಮನ ಒಡೆವೆಗಳನ್ನು ಮಾರಿ ಆ ದುಡ್ಡಿನಿಂದ ಪ್ಯಾರಾಲಂಪಿಕ್ಸ್ ನಲ್ಲಿ ಭಾಗವಹಿಸಿದ್ದೆ”

“ಮೊದಲೆಲ್ಲ ಪ್ಯಾರಾಲಂಪಿಕ್ಸ್ ಭಾಗವಹಿಸುವ ಕ್ರೀಡಾಪಟುಗಳಿಗೆ ಯಾವುದೇ ಸೌಕರ್ಯವಿರಲಿಲ್ಲ. ಎಲ್ಲರಿಗೂ ಚಿನ್ನದ ಪದಕ ಗೆದ್ದಾಗ ಖುಷಿಯಾಗುತ್ತದೆ. ನನಗೆ 2004ರ ಪ್ಯಾರಾಲಂಪಿಕ್ಸ್ ಚಿನ್ನ ಗೆದ್ದಾಗ ಖಷಿಯಾಗಲಿಲ್ಲ. ಬದಲಾಗಿ ಹ್ಯಾಟ್ರಿಕ್ ಪದಕ ಗೆಲ್ಲಬೇಕೆಂಬ ಕನಸು ಮೂಡಿತು. ಆ ಕನಸು ಇವತ್ತು ನನಸಾಗಿದೆ”

“ಮೊದಲೆಲ್ಲ ಪ್ಯಾರಾಲಂಪಿಕ್ಸ್ ಗೆ ಹೋದಾಗ ನಮ್ಮ ಜೊತೆ ಯಾರೂ ಇರುತ್ತಿರಲಿಲ್ಲ. ನಮ್ಮ ಪಾಡಿಗೆ ನಾವು ಹೋಗಿ ಪಂದ್ಯದಲ್ಲಿ ಭಾಗವಹಿಸಿ ಬರುತ್ತಿದ್ದೆವು. ಆದರೆ ಈ ವರ್ಷದ ಪ್ಯಾರಾಲಂಪಿಕ್ಸ್  ಚಿತ್ರಣವೇ ಬೇರೆಯಾಗಿತ್ತು. ಪ್ರತಿ ಕ್ರೀಡಾಪಟುವಿನ ಹಿಂದೆಯೂ ಕೋಚರ್, ಪಿಜಿಯೋಥೆರಪಿಸ್ಟ್, ಮ್ಯಾನೇಜರ್ ಇರುತ್ತಿದ್ದರು ಎಂದು ದೇವೇಂದ್ರ ಮೋದಿಯವರಲ್ಲಿ ತಮ್ಮ ಪ್ಯಾರಾಲಂಪಿಕ್ಸ್ ಅನುಭವವನ್ನು ಹಂಚಿಕೊಂಡಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss