ಉಕ್ರೇನ್‌ ಗೆ 530 ಮಿಲಿಯನ್‌ ಡಾಲರ್‌ ನೆರವು ಘೋಷಿಸಿದ ವಿಶ್ವ ಬ್ಯಾಂಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣವು ಮುಂದುವರೆಯುತ್ತಿರುವುದರ ಬೆನ್ನಲ್ಲೇ ಉಕ್ರೇನ್‌ ಗೆ 530 ಮಿಲಿಯನ್‌ ಡಾಲರ್‌ ಆರ್ಥಿಕ ನೆರವು ನೀಡುವುದಾಗಿ ವಿಶ್ವ ಬ್ಯಾಂಕ್‌ ಘೋಷಿಸಿದೆ. ಇದರಿಂದಾಗಿ ಉಕ್ರೇನ್ ಗೆ 13 ಬಿಲಿಯನ್‌ ಡಾಲರ್‌ ಒಟ್ಟೂ ಸಹಾಯ ಮಾಡಿದಂತಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ಈ ನೆರವಿನಲ್ಲಿ ಯುನೈಟೆಡ್‌ ಕಿಂಗ್‌ ಡಮ್‌ 500 ಮಿಲಿಯನ್‌ ಡಾಲರ್‌ ಹಾಗೂ ಕಿಂಗ್‌ಡಮ್ ಆಫ್ ಡೆನ್ಮಾರ್ಕ್ 30 ಮಿಲಿಯನ್ ಡಾಲರ್‌ ಬೆಂಬಲ ನೀಡಿವೆ ಎಂದು ವಿಶ್ವ ಬ್ಯಾಂಕ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇಲ್ಲಿಯವರೆಗೆ ಉಕ್ರೇನ್‌ಗೆ ಘೋಷಣೆಯಾಗಿರುವ 13 ಶತಕೋಟಿಯ ಡಾಲರ್‌ ಮೊತ್ತದ ಒಟ್ಟು ಸಹಾಯದಲ್ಲಿ, 11 ಶತಕೋಟಿ ಡಾಲರ್‌ ಗಳಷ್ಟನ್ನು ಸಂಪೂರ್ಣವಾಗಿ ವಿತರಿಸಲಾಗಿದೆ ಎಂದು ವಿಶ್ವ ಬ್ಯಾಂಕ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ವಿಶ್ವಬ್ಯಾಂಕ್‌ನ ಇತ್ತೀಚಿನ ವಿಶ್ಲೇಷಣೆಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ ಉಕ್ರೇನ್‌ನಲ್ಲಿ ಪುನರ್ನಿರ್ಮಾಣ ಮತ್ತು ಚೇತರಿಕೆಯ ಒಟ್ಟು ದೀರ್ಘಾವಧಿಯ ವೆಚ್ಚವು 100 ಶತಕೋಟಿ ಡಾಲರ್‌ ಗಿಂತಲೂ ಹೆಚ್ಚು ಎಂದು ಪೂರ್ವ ಯುರೋಪ್‌ನ ವಿಶ್ವಬ್ಯಾಂಕ್ ಪ್ರಾದೇಶಿಕ ನಿರ್ದೇಶಕ ಅರೂಪ್ ಬ್ಯಾನರ್ಜಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!