ಅಮೇಜಾನ್‌, ಗೂಗಲ್‌ ಇತ್ಯಾದಿ ಟೆಕ್‌ ದೈತ್ಯರ ನಿಯಂತ್ರಣಕ್ಕೆ ಯೋಚಿಸ್ತಿದೆ ಜಗತ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಾಗತಿಕ ಟೆಕ್‌ ದಿಗ್ಗಜ ಕಂಪನಿಗಳಿಗೆ ಈಗ ಭಾರೀ ಹಿನ್ನಡೆಯುಂಟಾಗುತ್ತಿದ್ದು ಅವುಗಳ ಪ್ರಭಾವನ್ನು ನಿಯಂತ್ರಿಸೋಕೆ ಈಗ ಜಾಗತಿಕ ಮಟ್ಟದಲ್ಲಿ ಪ್ರಯತ್ನಗಳಾಗುತ್ತಿವೆ. ತಮ್ಮ ತಂತ್ರಜ್ಞಾನಗಳನ್ನು ಬಳಸಿಕೊಂಡು ದೇಶದ ಭದ್ರತೆ, ಆರ್ಥಿಕತೆಗೆ ಸವಾಲೊಡ್ಡುವ ಮಟ್ಟಿಗೆ ಬೆಳೆದುಬಿಟ್ಟಿದ್ದ ಅಮೆಜಾನ್‌, ಗೂಗಲ್‌, ಮೆಟಾ ಮತ್ತು ಮೈಕ್ರೋಸಾಫ್ಟ್‌ ನಂತಹ ದೈತ್ಯ ಕಂಪನಿಗಳಿಗೆ ಮೂಗುದಾರ ಹಾಕಲು ಪ್ರಪಂಚದಾದ್ಯಂತ ಬೇರೆ ಬೇರೆ ಸರ್ಕಾರಗಳು ಪ್ರಯತ್ನ ನಡೆಸುತ್ತಿವೆ.

ತಮ್ಮ ತಂತ್ರಜ್ಞಾನ ವ್ಯವಸ್ಥೆಗಳನ್ನು ಬಳಸಿಕೊಂಡು ಬೇರೆ ಬೇರೆ ಭಾಗಗಳ ಜನರನ್ನು ಪ್ರಭಾವಿಸುವಲ್ಲಿ ಈ ಟೆಕ್‌ ದೈತ್ಯ ಕಂಪನಿಗಳೂ ಪ್ರಮುಖ ಪಾತ್ರ ವಹಿಸುತ್ತಿವೆ ಎಂಬ ಆರೋಪಗಳು ಜಗತ್ತಿನಾದ್ಯಂತ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಅಮೆರಿಕ ಸೇರಿದಂತೆ ಪ್ರಮುಖ ರಾಷ್ಟ್ರಗಳು ಇವುಗಳನ್ನು ಕಾನೂನಿನ ಚೌಕಟ್ಟಿನ ಮೂಲಕ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿವೆ. ಈ ಪ್ರಯತ್ನಗಳೀಗ ಜಗತ್ತಿನ ಇತರ ಭಾಗಗಳಲ್ಲಿಯೂ ನಡೆಯುತ್ತಿದ್ದು ಇತ್ತೀಚೆಗಷ್ಟೇ ಭಾರತದ ಸ್ಪರ್ಧಾತ್ಮಕ ಆಯೋಗ (CCI) ಆಲ್ಫಾಬೆಟ್ ತನ್ನ ಜನಪ್ರಿಯ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಸ್ಮಾರ್ಟ್‌ಫೋನ್ ಸಾಫ್ಟ್‌ವೇರ್ ಮಾರುಕಟ್ಟೆಯಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿದೆ. ಅಲ್ಲದೇ ಕಂಪನಿಗೆ 13.4 ಬಿಲಿಯನ್ ರೂಪಾಯಿ (162 ಮಿಲಿಯನ್ ಡಾಲರ್) ದಂಡ ವಿಧಿಸಿದ್ದು ಯುಟ್ಯೂಬ್ ಮತ್ತು ಗೂಗಲ್ ಮ್ಯಾಪ್‌ಗಳಂತಹ ಜನಪ್ರಿಯ ಗೂಗಲ್ ಅಪ್ಲಿಕೇಶನ್‌ಗಳನ್ನು ಆಂಡ್ರಾಯ್ಡ್‌ ಸಿಸ್ಟಂಗಳಲ್ಲಿ ಮುಂಚಿತವಾಗಿಯೇ ಸ್ಥಾಪಿಸುವುದನ್ನು ನಿಲ್ಲಿಸುವಂತೆ ಹೇಳಿದೆ.

ಕೆಲ ವರದಿಗಳ ಪ್ರಕಾರ ಈ ದಿಗ್ಗಜ ಕಂಪನಿಗಳು 2021ರಲ್ಲಿ ಅಮೆರಿಕದ ಕಾಂಗ್ರೆಸ್‌ ನಲ್ಲಿ ಲಾಬಿ ಮಾಡಲು 70 ಬಿಲಿಯನ್‌ ಡಾಲರ್‌ ಗಳಷ್ಟು ಹಣವನ್ನು ಖರ್ಚು ಮಾಡಿವೆ. ಆದರೆ ಈ ಪ್ರಯತ್ನಗಳು ವಿಫಲವಾಗಿದ್ದು ಇದೀಗ ಜಗತ್ತಿನ ಪ್ರಮುಖ ರಾಷ್ಟ್ರಗಳಲ್ಲಿ ಇವುಗಳ ಪ್ರಭಾವವನ್ನು ನಿಯಂತ್ರಿಸಲು ಪ್ರಯತ್ನಗಳು ನಡೆಯುತ್ತಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!