Monday, July 4, 2022

Latest Posts

ಅಡಿಕೆ ಕೊಯ್ಯುತ್ತಿದ್ದ ಯುವಕ ವಿದ್ಯುತ್ ಆಘಾತಕ್ಕೆ ಬಲಿ

ಹೊಸದಿಗಂತ ವರದಿ, ಕೊಡಗು:
ಕರಿ ಮೆಣಸು ಕೊಯ್ಯುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಷವಾಗಿ ಕೃಷಿಕರೊಬ್ಬರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಅಡಿಕೆ ಕೊಯ್ಯುತ್ತಿದ್ದ ಯುವಕನೊಬ್ಬ‌ ವಿದ್ಯುತ್ ತಗುಲಿ ಸಾವಿಗೀಡಾದ ಘಟನೆ ದಕ್ಷಿಣ ಕೊಡಗಿನಲ್ಲಿ ನಡೆದಿದೆ.
ದಕ್ಷಿಣ ಕೊಡಗಿನ ಬಿ.ಶೆಟ್ಟಿಗೇರಿ ಗ್ರಾಮದ ನಾಮೇರ ಪ್ರಸನ್ನ ಎಂಬವರ ಪುತ್ರ ದಿಶನ್ ದೇವಯ್ಯ (22) ಮೃತಪಟ್ಟ ಯುವಕ.
ಅಡಿಕೆ ಕೊಯ್ಯುತ್ತಿದ್ದ ವೇಳೆ ಕಬ್ಬಿಣದ ಸಲಾಕೆಗೆ ವಿದ್ಯುತ್ ಪ್ರವಹಿಸಿ ಮೃತಪಟ್ಟಿರುವುದಾಗಿ ಹೇಳಲಾಗಿದೆ.
ಸಂಪಾಜೆ ಸಮೀಪದ ಚೆಂಬು ಊರುಬೈಲು ಗ್ರಾಮದಲ್ಲಿ ಬುಧವಾರ ಕರಿಮೆಣಸು ಕೊಯ್ಯುವಾಗ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ತಗುಲಿ ನಡುಮನೆ ಡಿ.ದಾಸಪ್ಪ(68) ಎಂಬವರು ಮೃತಪಟ್ಟಿದ್ದು, ಈ ಘಟನೆ‌ ನಡೆದ‌ ಮಾರನೇ ದಿನವೇ ಮತ್ತೊಬ್ಬರು ಬಲಿಯಾಗಿರುವುದು ದುರಂತ
ಕೊಡಗಿನಲ್ಲಿ ಕರಿಮೆಣಸು, ಅಡಿಕೆ ಕೊಯ್ಲಿಗೆ ಅಲ್ಯೂಮಿನಿಯಂ ಏಣಿ ಬಳಸುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು,‌ ಪ್ರತೀವರ್ಷ ಇಂತಹ ದುರ್ಘಟನೆಗಳು ವರದಿಯಾಗುತ್ತಲೇ ಇರುತ್ತವೆ.
ಅಲ್ಯೂಮಿನಿಯಂ ಏಣಿಯ ಬದಲು ಈ‌‌ ಹಿಂದಿನಂತೆ ಬಿದಿರಿನ‌ ಏಣಿಗಳನ್ನು ಬಳಸುವಂತೆ ವಿದ್ಯುತ್ ನಿಗಮದ‌ ಅಧಿಕಾರಿಗಳು ಆಗಿಂದಾಗ್ಗೆ ಸಲಹೆ ನೀಡುತ್ತಿದ್ದರರೂ,‌ ಕೆಲವರು ಇದನ್ನು ನಿರ್ಲಕ್ಷಿಸುತ್ತಿರುವುದು ಇಂತಹ‌ ಅವಘಡಗಳು ಅಧಿಕವಾಗಲು ಕಾರಣವಾಗುತ್ತಿರುವುದು ಸುಳ್ಳಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss