Sunday, August 14, 2022

Latest Posts

ಒಂದು ಲಕ್ಷದ ಲ್ಯಾಪ್‌ಟಾಪ್ ಆರ್ಡರ್ ಮಾಡಿದ ಯುವತಿಗೆ ಸಿಕ್ಕಿದ್ದು ಖಾಲಿ ಡಬ್ಬಿ ಮಾತ್ರ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊಚ್ಚಿಯ ವಿದ್ಯಾರ್ಥಿನಿಯೊಬ್ಬಳು ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದು, ಲ್ಯಾಪ್‌ಟಾಪ್ ಬದಲು ಖಾಲಿ ಡಬ್ಬಿ ಆಕೆಗೆ ಸಿಕ್ಕಿದೆ.
ಹೌದು, ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಅಮೆಜಾನ್‌ನಲ್ಲಿ ಏಸರ್ ಕಂಪನಿಯ ಹೈ ಎಂಡ್ ಲ್ಯಾಪ್‌ಟಾಪ್ ಆರ್ಡರ್ ಮಾಡಿದ್ದರು.
ಇದಕ್ಕೆ 1.14 ಲಕ್ಷ ಮೊತ್ತವಾಗಿದ್ದು, ಆರ್ಡರ್ ಬರುವ ಮುನ್ನವೇ ಅದನ್ನು ಪಾವತಿಸಿದ್ದರು.
ಪ್ರಾಡಕ್ಟ್‌ಗಳನ್ನು ಅನ್‌ಬಾಕ್ಸ್ ಮಾಡುವಾಗ ಅದನ್ನು ವಿಡಿಯೋ ಮಾಡಿ ಅಪ್‌ಲೋಡ್ ಮಾಡುವ ಅಭ್ಯಾಸ ಯುವತಿಗಿತ್ತು. ಅಂತೆಯೇ ಯುವತಿ ಲ್ಯಾಪ್‌ಟಾಪ್ ಅನ್‌ಬಾಕ್ಸ್ ಮಾಡುವ ವಿಡಿಯೋವನ್ನು  ಮಾಡಿದ್ದಳು. ಲ್ಯಾಪ್‌ಟಾಪ್ ಇಲ್ಲದೆ ಖಾಲಿ ಡಬ್ಬಿ ಇರುವುದನ್ನು ಕಂಡು ಆಕೆ ಶಾಕ್ ಆಗಿದ್ದಾಳೆ. ಅಷ್ಟೊಂದು ಹಣ ಮುಂಚೆಯೇ ಪಾವತಿಸಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದಾರೆ. ಈ ಬಗ್ಗೆ ಅಮೆಜಾನ್‌ಗೆ ದೂರು ನೀಡಲಾಗಿದೆ. ಆದರೂ ಸಮಸ್ಯೆ ಬಗೆಹರಿದಿಲ್ಲ. ತಾನು ರೆಕಾರ್ಡ್ ಮಾಡಿರುವ ವಿಡಿಯೋವನ್ನು ಯುವತಿ ಪೊಲೀಸರಿಗೆ ನೀಡಿ, ದೂರು ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss