ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಕೊಡಗು:
ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಖಜಾನೆಯನ್ನೇ ಲೂಟಿ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಸಂಬಂಧ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ನಗದು ಶಾಖೆಯ ವಿಷಯ ನಿರ್ವಾಹಕ ರಂಜಿತ್ ಕುಮಾರ್ ಅವರು ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದು, ಸುಮಾರು 8.40 ಲಕ್ಷ ರೂ. ದುರುಪಯೋಗವಾಗಿರುವ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯು 2020-21ನೇ ಸಾಲಿನಲ್ಲಿ ಪೊಲೀಸ್ ಧ್ವಜ ಮಾರಾಟದಿಂದ 7.38ಲಕ್ಷ ಹಾಗೂ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಹಾಕಿದ್ದ ಮೊತ್ತವನ್ನು ಪೊಲೀಸ್ ವರಿಷ್ಠಾಧಿಕಾರಿ ಅವರ ನಗದು ಶಾಖೆಯ
ಖಜಾನೆಯಲ್ಲಿ ಇರಿಸಲಾಗಿತ್ತೆನ್ನಲಾಗಿದೆ. ಈ ಹಣವನ್ನು ಸರ್ಕಾರಕ್ಕೆ ಸಂದಾಯ ಮಾಡಲು ಖಜಾನೆ ಬಾಗಿಲು ತೆಗೆಯುವುದಕ್ಕೆ
ಹೋದಾಗ ಅದರ ಬೀಗ ತೆಗೆದಿರುವುದು ಬೆಳಕಿಗೆ ಬಂದಿದೆ.
ಹೀಗಾಗಿ ರಂಜಿತ್ ಕುಮಾರ್ ಅವರು ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದಿದ್ದು, ಈ ನಗದು ಕಳವು ಮಾಡಿರುವುದರ ಹಿಂದೆ ಎಸ್ಪಿ ಕಚೇರಿಯ ಇಬ್ಬರು ಕೆಲಸ ಮಾಡುವ ಇಬ್ಬರು ದ್ವಿತೀಯ ದರ್ಜೆ ಸಹಾಯಕರು ಹಾಗೂ ಓರ್ವ ಡಿ ಗ್ರೂಪ್ ನೌಕರ ಮೇಲೆ ಸಂಶಯ ವ್ಯಕ್ತವಾಗಿದೆ.
ಹಣ ಕಳವಾಗಿರುವ ಘಟನೆ ಬೆಳಕಿಗೆ ಬರುವುದಕ್ಕೆ ಎರಡು ದಿನದ ಮುಂಚೆ ಇಬ್ಬರು ಸಿಬ್ಬಂದಿ ಖಜಾನೆ ಕಡೆಗೆ ಹೋಗಿ ಬರುತ್ತಿದ್ದನ್ನು ಉಳಿದ ಸಿಬ್ಬಂದಿ ನೋಡಿದ್ದಾರೆನ್ನಲಾಗಿದ್ದು, ಹೀಗಾಗಿ ಖಜಾನೆಯಿಂದ ಹಣ ಲೂಟಿ ಆಗಿರುವುದರ ಹಿಂದೆ ಈ ಸಿಬ್ಬಂದಿಗಳ ಕೈವಾಡವಿರುವುದಾಗಿ ಶಂಕಿಸಲಾಗಿದೆ.