Wednesday, August 10, 2022

Latest Posts

ಚಿನ್ನದಂಗಡಿ ದರೋಡೆ, ಹತ್ಯೆ ಗ್ಯಾಂಗ್‌ನ ಲೀಡರ್‌ಗಾಗಿ ಪೊಲೀಸರ ಶೋಧ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ವರದಿ, ಮೈಸೂರು:

ಅರಮನೆ ನಗರಿ ಮೈಸೂರಿನ ವಿದ್ಯಾರಣ್ಯಪುರಂನ ಪ್ರಮುಖ ರಸ್ತೆಯಲ್ಲಿರುವ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಅಂಗಡಿಯ ದರೋಡೆ ಹಾಗೂ ಯುವಕನೊಬ್ಬನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬುಡ್ಡಾನಿಗಾಗಿ ಮೈಸೂರಿನ ಪೊಲೀಸರು ಬಾಂಬೆಯಲ್ಲಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಈಗಾಗಲೇ ಬಂಧಿತರಾಗಿರುವ ದರೋಡೆಕೋರರು ತಮ್ಮ ಗ್ಯಾಂಗ್‌ನ ಲೀಡರ್ 60 ವರ್ಷ ವಯಸ್ಸಿನ ಬುಡ್ಡ ಎಂದು ತಿಳಿಸಿದ್ದಾರೆ.
ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಅಂಗಡಿಯಲ್ಲಿ ಸುಮಾರು 2 ಕೆಜಿಗೂ ಹೆಚ್ಚು ಚಿನ್ನಾಭರಣ ದರೋಡೆ ಮಾಡಿದ್ದು, ಇದರ ಪೈಕಿ ಸುಮಾರು 1ಕೆಜಿಯಷ್ಟು ಚಿನ್ನ ತಮ್ಮ ಗ್ಯಾಂಗ್ ಲೀಡರ್ ಬುಡ್ಡಾನ ಬಳಿಯೇ ಇದೆ ಎಂದು ಬಂಧಿತ ದರೋಡೆಕೋರರು ಪೊಲೀಸರಿಗೆ ವಿಚಾರಣೆ ವೇಳೆ ತಿಳಿಸಿದ್ದಾರೆ. ಬುಡ್ಡ 20 ವರ್ಷದವನಿದ್ದಾಗಲಿಂದಲೂ ಕಳ್ಳತನ ಮಾಡುತ್ತಿದ್ದು, ಆಭರಣ ದರೋಡೆ ಮಾಡುವುದರಲ್ಲಿ ಪರಿಣಿತಿ ಹೊಂದಿದ್ದ. ಈತನನ್ನ ಬಾಂಬೆ ಬುಡ್ಡಾ ಅಂತಲೇ ಕರೆಯಲಾಗುತ್ತಿದೆ. ಸದ್ಯ ಪ್ರಕರಣದಲ್ಲಿ ಆರೋಪಿ ತಲೆ ತಪ್ಪಿಸಿಕೊಂಡಿದ್ದು, ಈತನನ್ನ ಬಂಧಿಸಲು ಮೈಸೂರು ಪೊಲೀಸರು ಮುಂಬೈಗೆ ತೆರಳಿ ಶೋಧಕಾರ್ಯ ನಡೆಸುತ್ತಿದ್ದಾರೆ. ಆದರೆ ಪೊಲೀಸರ ಕೈಗೆ ತಪ್ಪಿಸಿಕೊಳ್ಳುತ್ತ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾನೆ. ಈತನನ್ನು ಬಂಧಿಸಿ, ದರೋಡೆ ಮಾಡಿದ ಚಿನ್ನಾಭರಣ ವಶಪಡಿಸಿಕೊಂಡರೆ, ಇಡೀ ಪ್ರಕರಣ ಎಲ್ಲಾ ಆರೋಪಿಗಳನ್ನು ಬಂಧಿಸಿ, ದರೋಡೆ ಮಾಡಿದ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಂಡoತಾಗುತ್ತದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss