Saturday, August 13, 2022

Latest Posts

ಮೊಂಟೆಪದವು ದೇವಸ್ಥಾದಲ್ಲಿ ಕಳವು: ಆರೋಪಿ ಸೆರೆ

ಹೊಸದಿಗಂತ ವರದಿ, ಮಂಗಳೂರು:

ಮಂಗಳೂರು ತಾಲೂಕಿನ ಮೊಂಟೆಪದವಿನ ದೇವಸ್ಥಾನಕ್ಕೆ ನುಗ್ಗಿ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೊಂಟೆಪದವು ನಿವಾಸಿ ತಾರಾನಾಥ್ (33) ಬಂಧಿತ.
ಈತ ದೇವಸ್ಥಾನದಲ್ಲಿ ಕಳವು ಮಾಡಿದ್ದಲ್ಲದೆ ಮೊಂಟೆಪದವು ನಿವಾಸಿ ಬದ್ರುಲ್ ಮುನೀರ್ ಎಂಬವರು ತಮ್ಮ ಮನೆಯ ಹೊರಗಡೆ ನಿಲ್ಲಿಸಿದ್ದ ಸ್ಕೂಟರ್’ನ್ನು ಕೂಡ ಕಳವು ಮಾಡಿದ್ದ. ಸ್ಕೂಟರ್ ನ ಡಿಕ್ಕಿಯಲ್ಲಿ 3,650 ರೂ. ನಗದು ಕೂಡ ಇತ್ತು ಎಂದು ಮುನೀರ್ ಠಾಣೆಗೆ ದೂರು ನೀಡಿದ್ದರು. ಕಳವಾದ ಸೊತ್ತುಗಳ ಮೌಲ್ಯಸುಮಾರು 78,650 ರೂ. ಎಂದು ಅಂದಾಜಿಸಲಾಗಿತ್ತು.

ಇದೀಗ ಆರೋಪಿಯನ್ನು ಬಂಧಿಸಿರುವ ಪೊಲೀಸರು ದೇವಸ್ಥಾನಕ್ಕೆ ನುಗ್ಗಿ ಕಾಣಿಕೆ ಡಬ್ಬಿಯಿಂದ ಹಣ ಕಳವು ಮಾಡಿದ ಪ್ರಕರಣ ಮತ್ತು ಸ್ಕೂಟರ್ ಕಳವಿಗೆ ಸಂಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss