ಹೊಸದಿಗಂತ ವರದಿ. ಶಿವಮೊಗ್ಗ:
ಕಳ್ಳತನ ಮಾಡಿದ್ದ ವಿವಿಧ ಕಂಪನಿಗಳ ಮೊಬೈಲ್ ಮಾರಾಟ ಮಾಡಲು ಭದ್ರಾವತಿಗೆ ತರುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ೧೧ ಲಕ್ಷ ರೂ. ಮೌಲ್ಯದ ಮೊಬೈಲ್ ಗುರುವಾರ ವಶಪಡಿಸಿಕೊಂಡಿದ್ದಾರೆ.
ಭದ್ರಾವತಿ ಭೋವಿ ಕಾಲೋನಿ ಶ್ರೀನಿವಾಸ(26) ಹಾಗೂ ಭದ್ರಾವತಿ ದುರ್ಗಿನಗರದ ಅಜಾಮ್ ಯಾನೆ ಬಾಬು ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ೧೨೦ ಮೊಬೈಲ್ ಫೋನ್ ಹಾಗೂ ಡೆಲ್ ಕಂಪನಿಯ ಒಂದು ಲ್ಯಾಪ್ ಟಾಪ್, ಒಂದು ದ್ವಿಚಕ್ರವಾಹನ ವಶಕ್ಕೆ ಪಡೆಯಲಾಗಿದೆ.
ಖಚಿತ ಮಾಹಿತಿ ಮೇರೆಗೆ ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಚನ್ನಗಿರಿ ರಸ್ತೆಯ ಸೀಗೆಬಾಗೆ ಬಳಿ ತಪಾಸಣೆ ನಡೆಸಿ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.