ದಿಗಂತ ವರದಿ ವಿಜಯಪುರ:
ನಗರದಲ್ಲಿ ಮಂಗಳವಾರ ರಾತ್ರಿ ಕಳ್ಳರು ತಮ್ಮ ಕೈ ಚಳಕ ತೋರಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇಲ್ಲಿನ ಗಣೇಶ ನಗರದ ಸುತ್ತಮುತ್ತಲಿನ ಚಿನ್ನದಂಗಡಿ, ಸಿಮೆಂಟ್, ಕಿರಾಣಿ ಸ್ಟೋರ್ ಹಾಗೂ ಬೇಕರಿ ಅಂಗಡಿಗಳ ಶೆಟರ್ ಮುರಿಯಲು ಕಳ್ಳರು ವಿಫಲ ಯತ್ನ ನಡೆಸಿದ್ದಾರೆ. ಅಲ್ಲದೆ ಹೇರ್ ಕಟಿಂಗ್ ಅಂಗಡಿಯ ಕ್ಯಾಶ್ ಕೌಂಟರ್ ನಲ್ಲಿ 8 ಸಾವಿರ ರೂ. ನಗದು ದೋಚಿದ್ದಾರೆ ಎಂದು ಹೇಳಲಾಗುತ್ತಿದೆ.
ಇಲ್ಲಿನ ದೃವ ಜುವೆಲರ್ಸ್ ಶಾಪ್ ನ ಅಂಗಡಿಯ ಶೆಟರ್ ಒಡೆಯಲು ಯತ್ನಿಸಿದ್ದಾರೆ. ಅಂಗಡಿ ಹೊರಗಡೆ ಇದ್ದ ಸಿಸಿ ಕ್ಯಾಮೆರಾ ಆಪ್ ಮಾಡಿರುವ ಕಳ್ಳರು ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ.
ಸ್ಥಳಕ್ಕೆ ಜಲನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಲನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.