spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

‘ಭಾರತ್ ಗೌರವ್’ ರೈಲುಗಳನ್ನು ಪರಿಚಯಿಸುತ್ತಿದೆ ಭಾರತೀಯ ರೈಲ್ವೆ

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ಥೀಮ್ ಆಧಾರಿತ ಪ್ರವಾಸಿ ಸರ್ಕ್ಯೂಟ್ ರೈಲುಗಳಾದ ‘ಭಾರತ್ ಗೌರವ್’ ರೈಲುಗಳನ್ನು ಪರಿಚಯಿಸುವುದಾಗಿ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ. ಅಂತಹ 190 ರೈಲುಗಳನ್ನು ಖಾಸಗಿ ಸಂಸ್ಥೆಗಳು ಮತ್ತು ಪ್ರವಾಸೋದ್ಯಮ ಇಲಾಖೆಗಳು ಹಾಗೂ ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ (ಐಆರ್‌ಸಿಟಿಸಿ)ನಂತಹ ರಾಜ್ಯ ಘಟಕಗಳು ಗುತ್ತಿಗೆಯಲ್ಲಿ ನಿರ್ವಹಿಸಲು ಅನುಮೋದಿಸಲಾಗಿದೆ.

ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಭಾರತ ಮತ್ತು ವಿಶ್ವದ ಜನರಿಗೆ ತೋರಿಸುವುದಕ್ಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸಲು ಈ ರೈಲುಗಳು ಸಹಾಯ ಮಾಡುತ್ತವೆ. ಸರಕು ಸಾಗಣೆ ಮತ್ತು ಪ್ರಯಾಣಿಕರ ವಿಭಾಗಗಳ ನಂತರ ರಾಷ್ಟ್ರೀಯ ಸಾರಿಗೆ ನೀಡುವ ಸೇವೆಗಳಲ್ಲಿ ಇದು ಮೂರನೇ ವಿಭಾಗವಾಗಿದೆ. ಆದರೆ ಇವುಗಳು ವೇಳಾಪಟ್ಟಿಯಲ್ಲಿ ಓಡುವ ಸಾಮಾನ್ಯ ರೈಲುಗಳಾಗಿರುವುದಿಲ್ಲ ಎಂದು ಸಚಿವ ವೈಷ್ಣವ್ ವಿವರಿಸಿದ್ದಾರೆ.

ಥೀಮ್ ಆಧಾರಿತ ರೈಲುಗಳ ವ್ಯಾಪ್ತಿ: ಭಾರತ್ ಗೌರವ್ ರೈಲುಗಳಿಗಾಗಿ ಸಚಿವಾಲಯವು 3,033 ಕೋಚ್ (ಬೋಗಿ)ಗಳನ್ನು ಗುರುತಿಸಿದೆ. ಈಗ ಐಸಿಎಫ್ ಕೋಚ್‌ಗಳನ್ನು ಮೀಸಲಿಡಲಾಗಿದೆ. ಭವಿಷ್ಯದಲ್ಲಿ ವಂದೇ ಭಾರತ್, ವಿಸ್ಟಾ ಡೋಮ್ ಮತ್ತು ಎಲ್‌ಎಚ್‌ಬಿ ಕೋಚ್‌ಗಳನ್ನು ಬೇಡಿಕೆಯ ಆಧಾರದ ಮೇಲೆ ಸೇರಿಸಬಹುದು.

ಇಂದಿನಿಂದ ಅರ್ಜಿಗಳನ್ನು ಸ್ವೀಕರಿಸಲು ಪ್ರಾರಂಭಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕರ್ನಾಟಕ, ಒಡಿಶಾ, ರಾಜಸ್ಥಾನ ಮತ್ತು ತಮಿಳುನಾಡು ರಾಜ್ಯಗಳು ಈ ರೈಲುಗಳನ್ನು ಓಡಿಸಲು ಆಸಕ್ತಿ ತೋರಿಸಿವೆ.

ಖಾಸಗಿ ವ್ಯಕ್ತಿಗಳು, ಟ್ರಸ್ಟ್‌ಗಳು, ಒಕ್ಕೂಟಗಳು, ಪ್ರವಾಸ ನಿರ್ವಾಹಕರು ಮತ್ತು ರಾಜ್ಯ ಸರಕಾರಗಳು ಸಹ ಈ ರೈಲುಗಳನ್ನು ವಿಶೇಷ ಪ್ರವಾಸೋದ್ಯಮ ಸರ್ಕ್ಯೂಟ್‌ಗಳಲ್ಲಿ ಓಡಿಸಲು ಅರ್ಜಿ ಸಲ್ಲಿಸಬಹುದು.

ಮಧ್ಯಸ್ಥಗಾರರು ಅಂದರೆ ಪ್ರವಾಸ ನಿರ್ವಾಹಕರು, ಖಾಸಗಿ ಸಂಸ್ಥೆಗಳು, ರಾಜ್ಯ ಸರಕಾರ ಇತ್ಯಾದಿ. ರೈಲುಗಳನ್ನು ಮಾರ್ಪಡಿಸುತ್ತಾರೆ ಮತ್ತು ಓಡಿಸುತ್ತಾರೆ. ರೈಲ್ವೇ ಇಲಾಖೆ ಅದರ ನಿರ್ವಹಣೆ, ಪಾರ್ಕಿಂಗ್ ಮತ್ತು ಇತರ ಸೌಲಭ್ಯಗಳಿಗೆ ಸಹಾಯ ಮಾಡುತ್ತದೆ.

ಭಾರತ್ ಗೌರವ್ ರೈಲುಗಳನ್ನು ಓಡಿಸುವ ಖಾಸಗಿ ಸಂಸ್ಥೆಗಳಿಗೆ ದರಗಳು ಮತ್ತು ಸೌಕರ್ಯಗಳನ್ನು ನಿಗದಿಪಡಿಸುವ ಸ್ವಾತಂತ್ರ್ಯವಿದೆ. ಪ್ರತಿ ರೈಲು 2 ಗಾರ್ಡ್ ವ್ಯಾನ್‌ಗಳನ್ನು ಒಳಗೊಂಡಂತೆ 14 ರಿಂದ 20 ಕೋಚ್‌ಗಳನ್ನು ಹೊಂದಿರುತ್ತದೆ.

ಥೀಮ್ ಆಧರಿಸಿ ಕೋಚ್‌ಗಳ ಒಳಾಂಗಣವನ್ನು ವಿನ್ಯಾಸಗೊಳಿಸುವುದಕ್ಕೆ ಅವಕಾಶವಿದೆ. ರೈಲಿನ ಒಳಗೆ ಮತ್ತು ಹೊರಗೆ ಬ್ರ್ಯಾಂಡಿಂಗ್ ಮತ್ತು ಜಾಹೀರಾತನ್ನು ಪ್ರದರ್ಶಿಸುವುದಕ್ಕೂ ಅನುಮತಿಸಲಾಗಿದೆ.

ಪ್ರವಾಸಿಗರಿಗೆ ರೈಲು ಪ್ರಯಾಣ, ಹೊಟೇಲ್ ವಸತಿ, ದೃಶ್ಯ ವೀಕ್ಷಣೆಯ ವ್ಯವಸ್ಥೆ, ಐತಿಹಾಸಿಕ/ಪರಂಪರೆಯ ತಾಣಗಳಿಗೆ ಭೇಟಿ, ಪ್ರವಾಸ ಮಾರ್ಗದರ್ಶಿಗಳು ಇತ್ಯಾದಿ ಒಳಗೊಂಡ ಪ್ಯಾಕೇಜ್ ನೀಡಲಾಗುತ್ತದೆ.

ಐಆರ್‌ಸಿಟಿಸಿ ಈಗಾಗಲೇ ರಾಮಾಯಣ ರೈಲು ಸರ್ಕ್ಯೂಟ್ ಅನ್ನು ನಡೆಸುತ್ತಿದೆ. ದೇಶಾದ್ಯಂತ ಪ್ರಮುಖ ಗುರುದ್ವಾರಗಳನ್ನು ಸಂಪರ್ಕಿಸುವ ‘ಗುರುದ್ವಾರ ರೈಲು ಸರ್ಕ್ಯೂಟ್’ ಅನ್ನು ಪ್ರಾರಂಭಿಸಲು ಯೋಜಿಸಲಾಗಿದೆ. ಈ ರೈಲುಗಳನ್ನು ಗುರುಕೃಪಾ ಎಂದು ಕರೆಯಲಾಗುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss