ಹೊಸದಿಗಂತ ವರದಿ, ಶಿವಮೊಗ್ಗ :
ರಾಜಕೀಯ ಪಕ್ಷಗಳಲ್ಲಿ ಗುಂಪುಗಳಿರುವುದನ್ನು ಕಂಡಿದ್ದೇವೆ. ಆದರೆ ರಾಜಕೀಯ ಪಕ್ಷಗಳಿಗಿಂತಲೂ ಹೆಚ್ಚು ಗುಂಪುಗಾರಿಕೆ
ಪತ್ರಕರ್ತರಲ್ಲಿ ಕಂಡುಬರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ವಿಷಾದಿಸಿದ್ದಾರೆ.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಪಾಲಿಕೆ ವತಿಯಿಂದ ಪತ್ರಿಕಾ ಸಂಪಾದಕರಿಗೆ ಲ್ಯಾಪ್ಟಾಪ್ ವಿತರಿಸಿ ಮಾತನಾಡಿದ ಅವರು, ಪತ್ರಕರ್ತರಿಗೆ ನಿವೇಶನ-ಲ್ಯಾಪ್ಟಾಪ್ ನೀಡುವುದರಿಂದ ಜೀವನ ನಡೆಯುವುದಿಲ್ಲ. ಆದರೆ ಇದು ಬಹಮಾನ ಇದ್ದಂತೆ. ಇದನ್ನು
ಕೊಡುವ ಸಂದರ್ಭದಲ್ಲಿಯೂ ಪತ್ರಕರ್ತರ ಹಲವು ಗುಂಪುಗಳು ಕಾಲೆಳೆಯುವ ಕೆಲಸ ಮಾಡುತ್ತವೆ. ಇದನ್ನು ಬಿಟ್ಟು ಒಂದಾಗಿ ಬಂದರೆ ಯಾವುದೇ ಸಹಾಯ ಮಾಡಲು ಸಿದ್ಧ ಎಂದು ಹೇಳಿದರು.
ಮೇಯರ್ ಸುವರ್ಣಾಶಂಕರ್, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ವಿಪಕ್ಷ ನಾಯಕ ಹೆಚ್.ಸಿ. ಯೋಗೀಶ್, ಉಪಮೇಯರ್ ಸುರೇಖಾ ಮುರಳೀಧರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ವಿಶ್ವಾಸ್, ವಿಶ್ವನಾಥ್, ಆರ್.ಸಿ. ನಾಯಕ್ ಮೊದಲಾದವರಿದ್ದರು.