ಕೊಯಮತ್ತೂರಿನಲ್ಲಿ ಹಳಿಗಿಳಿದಿದೆ ದೇಶದ ಮೊದಲ ಖಾಸಗಿ ರೈಲು 

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ರೈಲ್ವೆ ಸೇವೆ ಆರಂಭವಾದ ಬಳಿಕ ಮೊದಲ ಬಾರಿಗೆ ದೇಶದಲ್ಲಿ ಖಾಸಗಿ ರೈಲು ತನ್ನ ಓಡಾಟ ಆರಂಭಿಸಿದೆ.
ಕೇಂದ್ರ ಸರ್ಕಾರದ ‘ಭಾರತ್ ಗೌರವ್’ ಯೋಜನೆಯಡಿ ಈ ಖಾಸಗಿ ರೈಲು ಕೊಯಮತ್ತೂರು ಮತ್ತು ಶಿರಡಿ ನಡುವೆ ತನ್ನ ಸಂಚಾರ ಆರಂಭಿಸಿದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಈ ಖಾಸಗಿ ರೈಲು ಸೇವೆಗೆ ಚಾಲನೆ ದೊರೆತಿದ್ದು, ಶಿರಡಿಗೆ ತಲುಪುವ  ಮೊದಲು, ತಿರುಪುರ್, ಈರೋಡ್, ಸೇಲಂ ಜೋಲಾರ್‌ಪೇಟ್, ಬೆಂಗಳೂರು ಯಲಹಂಕ, ಧರ್ಮಾವರ, ಮಂತ್ರಾಲಯ ರಸ್ತೆ ಮತ್ತು ವಾಡಿಯಲ್ಲಿ ನಿಲುಗಡೆಗೊಳ್ಳಲಿದೆ. ಈ ರೈಲಿನ ದರಗಳು ಭಾರತೀಯ ರೈಲ್ವೆ  ವಿಧಿಸುವ ಇತರೆ ರೈಲುಗಳ ಟಿಕೆಟ್‌ಗೆ ಸಮನಾಗಿರುತ್ತದೆ.
ಈ ನಡುವೆ ದಕ್ಷಿಣ ರೈಲ್ವೆ ಮಜ್ದೂರ್ ಯೂನಿಯನ್‌ಗೆ ಸೇರಿದ ರೈಲ್ವೆ ನೌಕರರು ಖಾಸಗಿ ರೈಲು ಸೇವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಭಾರತೀಯ ರೈಲ್ವ್ವೆಯನ್ನು ಖಾಸಗೀಕರಣಗೊಳಿಸುವ ಉದ್ದೇಶ ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!