ಮದ್ಯ ಖರೀದಿಸುವ- ಸೇವಿಸುವ ವಯಸ್ಸಿನ ಮಿತಿಯಲ್ಲಿ ಇಲ್ಲ ಬದಲಾವಣೆ: ಸಚಿವ ಕೆ ಗೋಪಾಲಯ್ಯ ಸ್ಪಷ್ಟನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಮದ್ಯ (Liquor) ಖರೀದಿಸುವ ಮತ್ತು ಸೇವಿಸುವ ವಯಸ್ಸಿನ ಮಿತಿಯನ್ನು 21 ವರ್ಷದಿಂದ 18 ಕ್ಕೆ ಇಳಿಸಲು ಮುಂದಾದ  ಸರ್ಕಾರ (Karnataka Government) ಇದೀಗ ಹಿಂದೇಟು ಹಾಕಿದ್ದು, ಈ ಪ್ರಸ್ತಾಪವನ್ನು ಸರ್ಕಾರ ಕೈ ಬಿಟ್ಟಿದೆ ಎಂದು ಅಬಕಾರಿ ಸಚಿವ ಕೆ ಗೋಪಾಲಯ್ಯ (K Gopalaiah) ತಿಳಿಸಿದ್ದಾರೆ.

ಸರ್ಕಾರ ಮತ್ತು ಅಬಕಾರಿ ಇಲಾಖೆ ನಡುವಿನ ಕಾಯ್ದೆಗೆ ತಿದ್ದುಪಡಿ ಮಾಡಿ ಏಕರೂಪದ ಕಾನೂನು ಜಾರಿಗೆ ತರಲು ಬಯಸಿದ್ದೇವು, ಆದರೆ ಮದ್ಯ ಸೇವನೆ ವಯಸ್ಸನ್ನು ಕಡಿಮೆ ಮಾಡದಿರಲು ನಿರ್ಧರಿಸಿದ್ದೇವೆ. ಸದ್ಯ ಮದ್ಯ ಖರೀದಿಸುವ ಮತ್ತು ಸೇವಿಸುವ ಮಿತಿಯನ್ನು 21 ವರ್ಷಕ್ಕೆನೇ ಕಡ್ಡಾಯಗೊಳಿಸಿದ್ದೇವೆ ಎಂದು ತಿಳಿಸಿದರು.

ಕರ್ನಾಟಕ ಅಬಕಾರಿ (Excise Department) ಕಾಯ್ದೆ 1965ರ ಪ್ರಕಾರ ಮದ್ಯ ಖರೀದಿಸುವ ವಯಸ್ಸು 21 ವರ್ಷ ಇದೆ. ಈಗ ಈ ಮಿತಿಯನ್ನು 18 ವರ್ಷಕ್ಕೆ ಇಳಿಸಲು

ಅಬಕಾರಿ ಇಲಾಖೆ ಜನವರಿ 9 ರಂದು ಕರಡು ಪ್ರಕಟಿಸಿದ್ದು, 30 ದಿನಗಳಲ್ಲಿ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿತ್ತು. ಇದೀಗ ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾದ ಹಿನ್ನೆಲೆ ಕೈಬಿಟ್ಟಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!