Monday, July 4, 2022

Latest Posts

ಮುಖ್ಯಮಂತ್ರಿ ಬದಲಾವಣೆ ಕುರಿತು ಪಕ್ಷದ ಚೌಕಟ್ಟಿನಲ್ಲಿ ಯಾವುದೇ ಚರ್ಚೆಯಾಗಿಲ್ಲ: ಶಾಸಕ ರಾಜುಗೌಡ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………

ಹೊಸದಿಗಂತ ವರದಿ, ವಿಜಯನಗರ:

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಕುರಿತು ಪಕ್ಷದ ಚೌಕಟ್ಟಿನಲ್ಲಿ ಯಾವುದೇ ಚರ್ಚೆಯಾಗಿಲ್ಲ. ಈ ಕುರಿತು ಹೈಕಮಾಂಡ್ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸುರಪುರ ಶಾಸಕ ರಾಜುಗೌಡ ಹೇಳಿದರು.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಾಯಕರು ಹಾಗೂ ರಾಜ್ಯಾಧ್ಯಕ್ಷ ನಳೀನ್ ಕುಮಾರ್‌ ಕಟೀಲ್ ಅವರು, ಸಿಎಂ ಆಗಿ ಯಡಿಯೂರಪ್ಪ ಅವರೇ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ಸದ್ಯ ಚೆರ್ಚೆ ಅಪ್ರಸ್ತುತ, ಇದರ ಜೊತೆಗೆ ಜು.26 ಕ್ಕೆ ಸರ್ಕಾರ ರಚನೆಯಾಗಿ 2 ವರ್ಷ ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಜು.25 ಕ್ಕೆ ಔತಣಕೂಟವನ್ನು ಆಯೋಜಿಸಲಾಗಿದೆ. ಇದಕ್ಕೆ ಕೆಲವರು ವಿಶೇಷ ಅರ್ಥವನ್ನು ನೀಡಿ ಮಾತನಾಡುತ್ತಿದ್ದಾರೆ, ನಾಯಕತ್ವದ ಕುರಿತು ಯಾವುದೇ ಗೊಂದಲವಿಲ್ಲ. ನಮ್ಮ ಕೆಲ ಶಾಸಕರು ಹಾಗೂ ಮಾಧ್ಯಮದಲ್ಲಿ ನಾಯಕತ್ವ ಕುರಿತು ಚರ್ಚೆಯಾಗುತ್ತಿದೆ, ಇದು ಚೆರ್ಚೆ ಅಷ್ಟೇ, ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದರು.
ಸಾಮಾಜಿಕ ಜಾಲ ತಾಣತಾಣದಲ್ಲಿ ಹರಿದಾಡುತ್ತಿರುವ ಆಡಿಯೋಗೆ ಹೆಚ್ಚಿನ ಮಹತ್ವ ನೀಡುತ್ತಿರೋ ಅಥವಾ ವ್ಯಕ್ತಿಗೆ ಹೆಚ್ಚಿನ ಮಹತ್ವ ನೀಡುತ್ತೀರಿ ? ನಳಿನ್ ಕುಮಾರ್ ಕಟೀಲ್ ಸರಳ ಸಜ್ಜನ ರಾಜಕಾರಣಿ. ಹಾಗಾಗಿ ಅವರು ಆ ರೀತಿಯಲ್ಲಿ ಮಾತನಾಡುವುದಕ್ಕೆ ಸಾಧ್ಯವೇ ಇಲ್ಲ. ದುಡಿಕಿ ಹಾಗೂ ಆವೇಶದಲ್ಲಿ ಅವರು ಮಾತನಾಡುವುದಿಲ್ಲ. ನಳಿನ್ ಕುಮಾರ್ ಕಟೀಲ್ ಅವರ ಧ್ವನಿಯನ್ನು ಯಾರೋ ಡಬ್ ಮಾಡಿದ್ದಾರೆ ಎಂದರು. ಕಾಂಗ್ರೆಸ್​ನಿಂದ 17 ಜನ ಶಾಸಕರು ಸಭೆ ಮಾಡಿರುವುದು ತಿಳಿದಿಲ್ಲ. ಸಿಎಂ ಸ್ಥಾನದಿಂದ ಯಡಿಯೂರಪ್ಪ ಅವರು ಬದಲಾವಣೆಯಾಗುತ್ತಾರೆ ಎನ್ನುವುದರ ಚರ್ಚೆ ಮಾಡಿರಬಹುದು. ಹೈಕಮಾಂಡ್ ಯಾವ ಲಾಬಿಗೆ ಮಣಿಯುವುದಿಲ್ಲ. ಕೇಂದ್ರ ಸಂಪುಟದಲ್ಲಿ ಪಕ್ಷಕ್ಕೆ ದುಡಿದವರಿಗೆ ಸಚಿವ ಸ್ಥಾನವನ್ನು ನೀಡಲಾಯಿತು. ‌ಅಲ್ಲದೇ, ದೆಹಲಿಗೆ ನಾಯಕರು ಭೇಟಿ ನೀಡುವ ಕುರಿತು ವಿಶೇಷ ಅರ್ಥವನ್ನು ಕಲ್ಪಿಸುವುದು ಬೇಡ. ನಾಯಕತ್ವ ಬದಲಾವಣೆಯಾಗುತ್ತೆ ಎಂದರೇ ನೂರು ಜನ ಹೋಗಿ ಬರುತ್ತಾರೆ. ಮಾಧ್ಯಮದಲ್ಲಿ ಬರಲು ದೆಹಲಿಗೆ ಹೋಗುತ್ತಿದ್ದಾರೆ ಎಂದರು. ಕೊಪ್ಪಳದ ಯಲಬುರ್ಗಾದ ಶಾಸಕ ಹಾಲಪ್ಪ ಆಚಾರ್ ಮಾತನಾಡಿ, ನಾಯಕತ್ವ ಬದಲಾವಣೆಯ ಪ್ರಶ್ನೆ ಬರುವುದಿಲ್ಲ. ರಾಷ್ಟ್ರ ನಾಯಕರು ನಾಯಕತ್ವದ ಕುರಿತು ಮಾತನಾಡಿಲ್ಲ‌. ಬದಲಾವಣೆ ದಿಢೀರ್ ಆಗಿ ಎದ್ದಿದೆ ಎಂದರು. ಸಚಿವ ಆನಂದ ಸಿಂಗ್ ಅವರ ತಂದೆ ಪೃಥ್ವಿರಾಜ್‌ ಸಿಂಗ್ ನಿಧರಾದ ಹಿನ್ನೆಲೆ ಇಬ್ಬರು ಶಾಸಕರು ಆನಂದ ಸಿಂಗ್ ಅವರ ಮನೆಗೆ ತೆರಳಿ ಸ್ವಾಂತನ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss