ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಟಿಕೆಟ್ ಸಿಗುವ ಬಗ್ಗೆ ನನಗೆ ಯಾವುದೇ ಅನುಮಾ ಇಲ್ಲ. ಟಿಕೆಟ್ ಖಂಡಿತಾ ಸಿಗುತ್ತದೆ. ಆದರೆ ಮಂಡ್ಯದಿಂದ ಸ್ಪರ್ಧೆ ಮಾಡಬೇಕು ಎನ್ನುವುದು ನನ್ನ ಆಸೆ ಎಂದು ಸಂಸದೆ ಸುಮಲತಾ ಅಂಬರೀಷ್ ಹೇಳಿದ್ದಾರೆ.
ನಾನು ಟಿಕೆಟ್ ಕೇಳ್ತೇನೆ, ಇದ್ರಲ್ಲಿ ಯಾವುದೇ ಡೌಟ್ ಇಲ್ಲ. ನನಗೆ ಆತ್ಮವಿಶ್ವಾಸ ಇದೆ. ಜೆಡಿಎಸ್ ಎನ್‌ಡಿಎ ಭಾಗ, ನಾನು ಕೂಡ ಎನ್‌ಡಿಎ ಭಾಗ. ಮಂಡ್ಯದಲ್ಲಿ ಸ್ಪರ್ಧಿಸಿ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಬಿಜೆಪಿ ಮಹಿಳಾ ಮೀಸಲಾತಿ ತಂದಿದೆ, ಹಾಗಾಗಿ ನನಗೆ ಟಿಕೆಟ್ ಸಿಕ್ಕೇ ಸಿಗುತ್ತದೆ. ಮೈತ್ರಿ ಅಂತಾದ್ಮೇಲೆ ಜೆಡಿಎಸ್ ಕಡೆಯಿಂದಲೂ ವಿಶ್ವಾಸ ಸಿಗುತ್ತದೆ ಎಂದುಕೊಂಡಿದ್ದೇನೆ ಎಂದಿದ್ದಾರೆ.