ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್‌ನಲ್ಲಿ ನಡೆದ ದಾಳಿಗೆ ಭಾರತ ಪ್ರತಿದಾಳಿ ನಡೆಸಿದೆ. ಪಹಲ್ಗಾಮ್ ದಾಳಿ ನಡೆದ ವಾರಗಳಲ್ಲಿ ಪ್ರವಾಸಿಗರು ಮತ್ತೆ ಅಲ್ಲಿಗೆ ತೆರಳಿದ್ದಾರೆ. ಭಾರತೀಯ ಸೇನೆ ಇರುವಾಗ ನಮಗೆ ಯಾವ ಭಯವೂ ಇಲ್ಲ ಎಂದು ಹೇಳಿದ್ದಾರೆ.
ಗುಜರಾತ್, ಕೇರಳ ಮತ್ತು ದೇಶದ ಇತರ ಭಾಗಗಳಿಂದಲೂ ಜನ ಇಲ್ಲಿಗೆ ಬರುತ್ತಿದ್ದಾರೆ. ಭಾರತ್ ಮಾತಾ ಕೀ ಜೈ, ಹಿಂದೂಸ್ತಾನ್ ಜಿಂದಾಬಾದ್ ಎನ್ನುತ್ತ ಪ್ರವಾಸಿಗರು ಸೆಲ್ಫೀ, ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಮತ್ತು ಭಾರತದ ಸೇನೆ ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ನಿನ್ನೆ ರಾತ್ರಿ ದಾಳಿ ನಡೆಸಿದ್ದನ್ನು ಗರ್ವದಿಂದ ಹೇಳುತ್ತ ಕೇಕೆ ಹಾಕುತ್ತಿದ್ದಾರೆ. ಸೇನೆಯಿಂದಾಗಿ ಪಹಲ್ಗಾಮ್ ಗೆ ಬರಲು ತಮಗೆ ಯಾವುದೇ ಭಯವಿಲ್ಲ ಎಂದು ಪ್ರವಾಸಿಗರು ಹೇಳುತ್ತಾರೆ.