ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, May 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರಾಜ್ಯದಲ್ಲಿ ಲಾಕ್ ಡೌನ್ ಪ್ರಯೋಜನ ಇಲ್ಲ: ಸಂಸದ ರಮೇಶ ಜಿಗಜಿಣಗಿ

ಹೊಸ ದಿಗಂತ ವರದಿ, ವಿಜಯಪುರ:

ರಾಜ್ಯಾದ್ಯಂತ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು, ಎಲ್ಲಡೆ ಸದ್ಯ ಲಾಕ್ ಡೌನ್ ಮಾತುಗಳು ಕೇಳಿ ಬರುತ್ತಿವೆ. ಆದರೆ ಲಾಕ್‌ಡೌನ್ ಮಾಡಿದರೆ ಪ್ರಯೋಜನ ಇಲ್ಲ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು‌.
ನಗರ ಹೊರಭಾಗದ ಬುರಣಾಪುರ ಬಳಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿ ಮಾತನಾಡಿದ ಅವರು, ಲಾಕ್‌ಡೌನ್ ಮಾಡಿದರೆ ಪ್ರಯೋಜನ ಆಗುತ್ತೆ ಅಂತಾ ಅನಿಸೋದಿಲ್ಲ. ಏಕೆಂದರೆ, ಮಹಾರಾಷ್ಟ್ರದಲ್ಲಿ ಲಾಕ್‌ಡೌನ್ ಮಾಡಿದ್ದಾರೆ. ಆದರೆ ಅಲ್ಲಿ ಏನು ಬಂದ್ ಇಲ್ಲ. ಎಂದಿನಂತೆ ಎಲ್ಲ ಜನಜೀವನ ನಡೆಯುತ್ತಿದೆ ಎಂದರು.
ಅದಕ್ಕಾಗಿ ಮುಂದಿನ ಬಾಗಿಲಿಗೆ ಕೀಲಿ ಹಾಕಿ ಇಟ್ಟಿದ್ದಾರೆ ಅಷ್ಟೇ. ಹೊರತು ಮೂರು ಕಡೆಗಳಲ್ಲಿ ಗೋಡೆಯೇ ಇಲ್ಲ. ಇನ್ನು ಲಾಕ್‌ಡೌನ್‌ನಿಂದ ಜನರಿಗೆ ತೊಂದರೆ ಆಗುತ್ತೆ. ಬಡವರು ಸಾಲ ಮಾಡಿ ವ್ಯಾಪಾರ ಮಾಡ್ತಿದ್ದಾರೆ. ಲಾಕ್‌ಡೌನ್ ಆದರೆ ಅವರೆಲ್ಲ ಏನ್ ಮಾಡಬೇಕು ಎಂದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss