ಹೊಸದಿಗಂತ ಕೊಪ್ಪಳ:
ತುಂಗಭದ್ರಾ ಜಲಾಶಯದಲ್ಲಿ 19ನೇ ಟ್ರಸ್ಟ್ ಗೇಟ್ ಮುರಿದ ಪ್ರಕರಣದಲ್ಲಿ ರಾಜಕೀಯ ಮಾಡುವುದಿಲ್ಲ. ಅಲ್ಲದೆ, ಸದ್ಯಕ್ಕೆ ಯಾರ ಮೇಲೆ ಗೂಬೆ ಕೂರಿಸಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಬಸಾಪೂರ ಗ್ರಾಮದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಬೋರ್ಡ್ ಇರುವುದು ಕೇಂದ್ರ ಸರಕಾರದ ಅಧೀನದಲ್ಲಿ. ಬೋರ್ಡ್ ಗೆ ಐಎಎಸ್ ಅಧಿಕಾರಿಗಳನ್ನು ಭಾರತ ಸರಕಾರ ನೇಮಕ ಮಾಡುತ್ತದೆ. ಬೋರ್ಡ್ ನಲ್ಲಿ ರಾಜ್ಯ, ಆಂಧ್ರ, ತೆಲಂಗಾಣದ ಅಧಿಕಾರಿಗಳು ಇರುತ್ತಾರೆ ಎಂದರು.