Friday, July 1, 2022

Latest Posts

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ರೆಮ್ಡಿಸಿವಿರ್ ಔಷಧಿ ಕೊರತೆಯಿಲ್ಲ: ಸಚಿವೆ ಶಶಿಕಲಾ ಜೊಲ್ಲೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸ ದಿಗಂತ ವರದಿ, ವಿಜಯಪುರ:

ನಗರದ ಜಿಲ್ಲಾಸ್ಪತ್ರೆಯಲ್ಲಿ ರೆಮ್ಡಿಸಿವಿರ್ ಔಷಧಿ ಕೊರತೆಯಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಖಾಸಗಿ ಆಸ್ಪತ್ರೆಯಲ್ಲಿ ರೆಮ್ಡಿಸಿವಿರ್ ಔಷಧಿಯ ಬೇಡಿಕೆ ಇದ್ದು, ಕೆಲವೊಮ್ಮೆ ಕೊರತೆಯು ಆಗುತ್ತಿದೆ. ರೆಮ್ಡಿಸಿವಿರ್ ಇದ್ದರೆ ನಮ್ಮ ಜೀವ ಬದುಕುತ್ತದೆ ಎಂಬುದು ರೋಗಿಗಳು ತಲೆಯಿಂದ ತಗೆದು ಹಾಕಬೇಕು. ಡಾಕ್ಟರ್ ಅದನ್ನು ನಿರ್ಣಯ ಮಾಡುತ್ತಾರೆ. ಡಾಕ್ಟರ್ ನಿರ್ದೇಶನದಂತೆ ರೆಮ್ಡಿಸಿವಿರ್ ಔಷಧಿ ಕೊಡುವ ಕೆಲಸ ಮಾಡಲಾಗುತ್ತದೆ. ಜನರು ಗಾಬರಿಯಾಗಬಾರದು ಎಂದು ಹೇಳಿದರು.
ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿ, ನನಗೆ ನಿನ್ನೆಯಿಂದ ಬಹುತೇಕ ಕರೆಗಳು ಬರುತ್ತಿವೆ. ದಿನ ಬಳಕೆ ವಸ್ತುಗಳ ದರ ಮಾರುಕಟ್ಟೆಯಲ್ಲಿ ಜಾಸ್ತಿ ಮಾಡುತ್ತಿದ್ದಾರೆ ಎಂದು ಕರೆಗಳು ಬರುತ್ತಿವೆ. ಯಾರಾದರೂ ಹಾಗೆ ಮಾಡಿದರೆ ಅವರ ಮೇಲೆ ಕ್ರಮ ಕೈಗೊಳ್ಳುವುದರ ಜೊತೆಗೆ ಲೈಸನ್ಸ್ ರದ್ದು ಮಾಡಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಾನವೀಯತೆ ಆಧಾರದ ಮೇಲೆ ವ್ಯಾಪಾರಸ್ಥರು ಜನರಿಗೆ ನೆರವಾಗಬೇಕೇ ಹೊರತು, ಈ ರೀತಿ ಮಾಡಬಾರದು ಎಂದರು.
ಜಿಲ್ಲಾಡಳಿತದಲ್ಲಿ ಎನೇ ಕುಂದು ಕೊರತೆ ಇದ್ದರೂ ಅದನ್ನು ಪರಿಸೀಲಿಸಿ ಬಗೆ ಹರಿಸುವೆ. ಈ ವಾರ ಪೂರ್ತಿ ತಾಲೂಕು ಮಟ್ಟದಲ್ಲಿ ಹೋಗಿ ಅಲ್ಲಿನ ಸಮಸ್ಯೆಗಳ ಕುರಿತು ತಾಲೂಕು ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದರು.
ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆ್ಯಂಬುಲೆನ್ಸ್ ಸಮಸ್ಯೆ ವಿಚಾರ ಕುರಿತು, ಆ್ಯಂಬುಲೆನ್ಸ್ ಸಮಸ್ಯೆ ಕುರಿತು ಕೂಡಾ ನನ್ನ ಗಮನಕ್ಕೆ ಬಂದಿದೆ. ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಬರುತ್ತಿಲ್ಲ ಎಂದು ದೂರುಗಳು ಬರುತ್ತಿವೆ. ಖಾಸಗಿ ಅವರು ಸಹಿತ ಹೆಚ್ಚಿನ ಬೆಲೆ ಕೇಳಿತ್ತಿದ್ದಾರೆ ಎಂಬ ದೂರುಗಳಿವೆ.
ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಅಂತಹವರ ಮೇಲೆ ಕ್ರಮ ಜರುಗಿಸಬೇಕು. ಸರ್ಕಾರಿ ಅಧಿಕಾರಿಗಳು ಸಹಿತ ತಪ್ಪು ಮಾಡಿದರೆ ಅವರ ವಿರುದ್ಧ ನಿರ್ದಾಕ್ಷ್ಯಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ರೆಮ್ಡಿಸಿವಿರ್ ಔಷಧಿ ಕಾಳ ಸಂತೆಯಲ್ಲಿ ಮಾರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ರೆಮ್ಡಿಸಿವಿರ್ ಔಷಧಿಯನ್ನು ಕೆಲ ಆಸ್ಪತ್ರೆ ಸಿಬ್ಬಂದಿ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಪ್ರಕರಣವನ್ನು ಸಹಿತ ದಾಖಲಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ದುರುಪಯೋಗ ಪಡೆಸಿಕೊಳ್ಳುವುದು ಮಾನವೀಯತೆ ಅಲ್ಲ. ಯಾರೇ ತಪ್ಪು ಮಾಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಅಷ್ಟೇ ಅಲ್ಲದೇ ಅವರ ಮೇಲೆ ಕ್ರಿಮಿನಲ್ ಪ್ರಕರಣ ಸಹಿತ ದಾಖಲಿಸಲಾಗುವುದು ಎಂದರು.
ಜಿಲ್ಲೆಯಲ್ಲಿ 32 ಖಾಸಗಿ ಆಸ್ಪತ್ರೆಗಳು ಕೋವಿಡ್ ಪೀಡಿತರಿಗೆ ಚಿಕಿತ್ಸೆ ನೀಡುತ್ತಿವೆ. ಸದ್ಯ ಆಕ್ಸಿಜನ್ ಕೊರತೆ ಹಾಗೂ ರೆಮ್ಡಿಸಿವಿರ್ ಹೀಗೆ ಕೆಲ ಸಮಸ್ಯೆಗಳು ಈಗ ಕಂಡು ಬರುತ್ತಿವೆ. ನಿನ್ನೆ ರಾತ್ರಿ ನಮಗೆ ಬೇಕಾಗಿರುವ 13 ಟನ್, ಎಲ್‌ಎಮ್‌ಸಿ ಆಕ್ಸಿಜನ್ ಕುಲಕರ್ಣಿ ಗ್ಯಾಸ್ ಎಜೆನ್ಸಿ ಬಳ್ಳಾರಿಯಿಂದ ಇಂದು ಪಡೆದುಕೊಳ್ಳುತ್ತೇವೆ. ಅದರ ಜೊತೆಗೆ ವಿವಿಧ ಕಡೆಯ ದಾನಿಗಳು ಇದ್ದರು ಹಾಗೂ ಕಡಿಮೆ ದರದಲ್ಲಿ ಆಕ್ಸಿಜನ್ ಕೊಟ್ಟರು ತರುವ ಯೋಚನೆ ಜಿಲ್ಲಾಡಳಿತಕ್ಕೆ ಇದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss