ಹೊಸದಿಗಂತ ಡಿಜಿಟಲ್ ಡೆಸ್ಕ್:
ರಜೆಗಾಗಿ ಐದು ವರ್ಷದ ವಿದ್ಯಾರ್ಥಿಯನ್ನು ಮೂವರು ಬಾಲಕರು ಹೊಡೆದು ಕೊಲೆ ಮಾಡಿರುವ ಘಟನೆ ದೆಹಲಿಯ ಮದರಸಾದಲ್ಲಿ ನಡೆದಿದೆ.
ಸುಮಾರು ಐದು ತಿಂಗಳ ಹಿಂದೆ ನಜಿನ್ ತನ್ನ ಮಗನನ್ನು ತಾಲಿಮ್-ಉಲ್-ಕುರಾನ್ ಮದರಸಾಗೆ ಸೇರಿಸಿದ್ದರು. ಮದರಸಾದಲ್ಲಿ ಬಾಲಕ ಅಸ್ವಸ್ಥನಾಗಿರುವ ಕುರಿತು ತಾಯಿಗೆ ಮಾಹಿತಿ ಸಿಕ್ಕಿತ್ತು, ತಕ್ಷಣ ಮದರಸಾಗೆ ಹೋಗಿ ಅಲ್ಲಿಂದ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದರು.
ವೈದ್ಯರು ಆತ ಮೃತಪಟ್ಟಿರುವುದಾಗಿ ಘೋಷಿಸಿದ್ದರು. ನಜಿನ್ ಮಗನ ಶವದೊಂದಿಗೆ ಮದರಸಾ ತಲುಪಿ ಗಲಾಟೆ ಮಾಡಿದರು, ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಮಧ್ಯೆ ಶುಕ್ರವಾರ ಸಂಜೆ ನಜಿನ್ ಮದರಸಾಕ್ಕೆ ಕರೆ ಮಾಡಿ ಮಗನ ಜತೆ ಮಾತನಾಡಲು ಹೇಳಿದಾಗ ಆಟವಾಡಲು ಹೊರಗೆ ಹೋಗಿರುವುದಾಗಿ ತಿಳಿಸಿದ್ದಾರೆ. ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಯಾರಾದರೂ ಶಾಲೆಯಲ್ಲಿ ಮೃತಪಟ್ಟರೆ ರಜೆ ಸಿಗುತ್ತೆ ಎಂದು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.