ಹಿಂದಿನಿಂದಲೂ ಬ್ರಿಟೀಷರ ಪಠ್ಯವೇ ಇತ್ತು, ನಾವು ಬಂದ ಮೇಲೆ ರಾಷ್ಟ್ರೀಯತೆಯ ಪಠ್ಯ ಸೇರಿಸಿದ್ದೇವೆ: ಸಚಿವ ಬಿ.ಸಿ.ನಾಗೇಶ್

ಹೊಸದಿಗಂತ ವರದಿ, ಮೈಸೂರು:

ನಾವು ಶಿಕ್ಷಣವನ್ನ ಮಾತ್ರ ಬದಲಾವಣೆ ಮಾಡಿಲ್ಲ. ದೇಶದಲ್ಲಿ ಎಲ್ಲವನ್ನು ಬದಲಾವಣೆ ಮಾಡಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.
ಬುಧವಾರ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದರು. ಉಭಯ ಕುಶಲೋಪರಿ ವಿಚಾರಿಸಿ ಕೆಲಕಾಲ ಮಾತುಕತೆ ನಡೆಸಿದರು. ಶ್ರೀಗಳ 80ನೇ ವರ್ಷದ ವರ್ಧಂತ್ಯುತ್ಸವ ಹಿನ್ನೆಲೆಯಲ್ಲಿ ಶುಭಕೋರಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ದೇಶದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಬರುವವರೆಗು ಅಂತರಾಜ್ಯ ರಸ್ತೆ ಇರಲಿಲ್ಲ. ನಾವು ರಸ್ತೆಯನ್ನು ಬದಲಾವಣೆ ಮಾಡಿದ್ದೇವೆ. ಅದರ ಬಗ್ಗೆಯು ಮಾತನಾಡಿ ಎಂದರು.
ಪಠ್ಯ ಪುಸ್ತಕ ಪರಿಷ್ಕರಣೆ ಕುರಿತು ಮಾತನಾಡುತ್ತಿರುವವರು ವಿಷಯದ ಮೇಲೆ ಮಾತನಾಡುತ್ತಿದ್ದಾರಾ? ರಾಜಕೀಯದ ಮೇಲೆ ಮಾತನಾಡುತ್ತಿದ್ದಾರಾ? ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದರೆ, ಅದು ವಿರೋಧವಲ್ಲ. ಆಗ ಒಂದೇ ಪಂಥದ ಪಠ್ಯ ಪುಸ್ತಕ ಸೇರಿದಾಗ ಅದು ತಪ್ಪಲ್ಲ ಅಲ್ವಾ. ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ನಮ್ಮ ಇಚ್ಚೆ ಪಂಥದಲ್ಲ. ನಾವು ಎಲ್ಲವನ್ನು ಒಪ್ಪಿ ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ. ಬಿಜೆಪಿ ಪಠ್ಯ ಸಂಸ್ಕರಣಾ ಮಾಡುತ್ತಿದ್ದಂತೆ. ನಿಮಗೆ ಚಾತುರ್ ವರ್ಣ ಎಲ್ಲ ನೆನಪಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ವಾಜಪೇಯಿ ಪ್ರಧಾನಿ ಆಗುವ ಮೊದಲು ಅಮೇರಿಕಾ ಹೇಳಿದಂತೆ ಭಾರತ ನಡೆಯುತ್ತಿತ್ತು. ಈ ದೇಶದಲ್ಲಿ ಯಾವಾಗ ಯುದ್ಧ ಆಗಬೇಕು ಎಂಬುದನ್ನು ಅಮೇರಿಕಾ ತೀರ್ಮಾನ ಮಾಡುತ್ತಿತ್ತು. ಆದರೆ ವಾಜಪೇಯಿ ಕಾರ್ಗೀಲ್ ಯುದ್ಧದಲ್ಲಿ ಕೊನೆ ಸೈನಿಕ ಹೋರಾಡುವವರೆಗೆ ಯಾರ ಜೊತೆ ಮಾತಾಡಲ್ಲ ಅಂದಿದ್ದರು. ಕಾಂಗ್ರೆಸ್ ಯಾರ್ ಯಾರಿಗೋ ರಾಜಿ ಮಾಡಿಕೊಂಡು ರಾಜಕೀಯ ಮಾಡಿದೆ. ಆದರೆ ನಾವು ರಾಜಕೀಯ ಮಾಡಿರೋದು ಈ ಜನರಿಗಾಗಿ ಈ ನೆಲಕ್ಕಾಗಿ, ಇಲ್ಲಿನ ಸಂಸ್ಕೃತಿಗಾಗಿ. ಬೇರೆ ದೇಶಗಳಲ್ಲಿ ನಮಗೆ 400-500 ವರ್ಷಗಳ ಇತಿಹಾಸ ಇಲ್ಲ. ಭಾರತಕ್ಕೆ 5-6 ಸಾವಿರ ವರ್ಷಗಳ ಇತಿಹಾಸ ಇದೆ. ನಾವು ಜ್ಞಾನ ಇಟ್ಟುಕೊಂಡು ಬೇರೆ ದೇಶಕ್ಕೆ ಹೋದವರು. ಬೇರೆಯವರಂತೆ ಪಿಸ್ತೂಲ್, ಕತ್ತಿ ಹಿಡಿದುಕೊಂಡು ಬಂದವರಲ್ಲ ಎಂದು ವಾಗ್ದಾಳಿ ನಡೆಸಿದರು.
ಪಠ್ಯ ಪುಸ್ತಕದಲ್ಲಿ ತಮ್ಮ ಪಠ್ಯ ಕೈ ಬಿಡುವಂತೆ ಸಾಹಿತಿ ದೇವನೂರ ಮಹದೇವ ಅವರು ಪತ್ರ ಬರೆದು ಮನವಿ ಮಾಡಿರುವ ಕುರಿತು . ಪ್ರತಿಕ್ರಿಯಿಸಿ, ದೇವನೂರು ಮಹದೇವ ಅವರು ಮೊದಲೇ ಹೇಳಿದ್ದರೇ ಚರ್ಚಿಸಬಹುದಿತ್ತು. ಈಗಾಗಲೇ ಪಠ್ಯ ಮುದ್ರಣವಾಗಿದೆ ಅದು ಮಕ್ಕಳ ಕೈ ಸೇರಲಿದೆ. ಈ ಸಂದರ್ಭಧಲ್ಲಿ ಪಠ್ಯ ತೆಗೆಯಲು ಆಗಲ್ಲ. ಇದನ್ನ ಮನವರಿಕೆ ಮಾಡುತ್ತೇವೆ. ದೇವನೂರ ಮಹದೇವ ಅವರಿಗೆ ತಾತ್ವಿಕ ಭಿನ್ನತೆ ಇರಬಹುದು ನಮಗಿಲ್ಲ, ಇದನ್ನ ಮಾತನಾಡಿ ಬಗೆಹರಿಸುತ್ತೇವೆ ಎಂದರು.
ದೇವನೂರು ಮಹದೇವ ಹೇಳುತ್ತಿರುವುದು ಸತ್ಯದ ಮಾತು. ನಾವು ಎಲ್ಲವನ್ನೂ ಬದಲಾವಣೆ ಮಾಡಿದ್ದೇವೆ . ಹಿಂದಿನಿoದಲೂ ಬ್ರಿಟೀಷರ ಪಠ್ಯವೇ ಇತ್ತು. ನಾವು ಬಂದ ಮೇಲೆ ರಾಷ್ಟ್ರೀಯತೆಯ ಪಠ್ಯ ಸೇರಿಸಿದ್ದೇವೆ. ಪರಿವರ್ತನೆ ಅನ್ನೋದು ಜಗದ ನಿಯಮ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!