ಹೊಸದಿಗಂತ ಆನ್ಲೈನ್ ಡೆಸ್ಕ್:
ಮನೆಯಲ್ಲಿ ಕುಟುಂಬದವರೆಲ್ಲ ಕುಳಿತು ನ್ಯೂಸ್ ನೋಡುವಾಗ ನ್ಯೂಸ್ ಚಾನೆಲ್ನಲ್ಲಿಯೇ ನೀಲಿ ಚಿತ್ರ ಬಂದುಬಿಟ್ಟರೆ?
ಇದನ್ನು ಇಮ್ಯಾಜಿನ್ ಮಾಡೋಕೂ ಆಗೋದಿಲ್ಲ. ಆದರೆ ಈ ರೀತಿ ಘಟನೆ ವಾಷಿಂಗ್ಟನ್ನ ನ್ಯೂಸ್ ಚಾನೆಲ್ ಒಂದರಲ್ಲಿ ನಡೆದಿದೆ.
ವಾಷಿಂಗ್ಟನ್ನಲ್ಲಿನ ಸ್ಪೋಕೇನ್ನಲ್ಲಿರುವ ಸ್ಥಳೀಯ ಸಿಬಿಎಸ್ ಸಂಯೋಜಿತ ಸುದ್ದಿವಾಹಿನಿಯಲ್ಲಿ ಸಂಜೆ ಆರು ಗಂಟೆಗೆ ಹವಾಮಾನ ವರದಿ ಪ್ರಸಾರವಾಗುತ್ತಿತ್ತು. ಇದೇ ವೇಳೆಗೆ 13 ಸೆಕೆಂಡುಗಳ ನೀಲಿ ಚಿತ್ರದ ತುಣುಕು ಬ್ಯಾಗ್ಗ್ರೌಂಡ್ನಲ್ಲಿ ಪ್ರಸಾರವಾಗಿತ್ತು.
ಹವಾಮಾನ ತಜ್ಞೆ ಮಿಶೆಲ್ ಬಾಸ್ ಹವಾಮಾನ ವರದಿ ಕುರಿತು ವಿವರಣೆ ನೀಡುತ್ತಿದ್ದ ವೇಳೆ ಈ ಎಡವಟ್ಟಾಗಿದೆ. ಆಂಕರ್ಗೂ ಕೂಡ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಅವರ ಪಾಡಿಗೆ ಅವರು ಜನರಿಗೆ ವರದಿ ಒಪ್ಪಿಸಿದ್ದಾರೆ. ತದನಂತರ ಸುದ್ದಿವಾಹಿನಿ ಈ ಬಗ್ಗೆ ಕ್ಷಮೆಯಾಚಿಸಿದೆ.