ಆಧಾರ್ ಕಾರ್ಡ್ ಇತ್ತು, ಬಸ್ ಫ್ರೀ ಇತ್ತು: ಮನೆ ಬಿಟ್ಟ ಮಕ್ಕಳು ಸಿಕ್ಕಿದ್ದು ಭದ್ರಾವತಿಯಲ್ಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಟ್ಯೂಷನ್‌ಗೆ ಹೋಗಲು ನಿರಾಕರಿಸಿದ್ದಕ್ಕೆ ಪೋಷಕರು ಬೈದಿದ್ದೇ ತಡ, ಮುನಿಸಿಕೊಂಡ 13 ವರ್ಷದ ಬಾಲಕಿಯೊಬ್ಬಳು ತನ್ನ 9 ವರ್ಷದ ತಮ್ಮನ ಜೊತೆಗೂಡಿ ನಗರವನ್ನೇ ಬಿಟ್ಟ ಘಟನೆ ಬೆಳಕಿಗೆ ಬಂದಿದೆ. ಸರ್ಕಾರದ ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯವಿರುವುದನ್ನೇ ಬಳಸಿಕೊಂಡ ಈ ಬಾಲಕಿ, ಬೆಂಗಳೂರಿನಿಂದ ನೇರವಾಗಿ ಶಿವಮೊಗ್ಗಕ್ಕೆ ಪ್ರಯಾಣ ಬೆಳೆಸಿದ್ದಳು. ಮಾರತಹಳ್ಳಿಯ ಅಶ್ವತ್ಥನಗರದ ಈ ಮಕ್ಕಳು ಮನೆಯಿಂದ ಹೊರಟು ಮಾರತಹಳ್ಳಿ ಬ್ರಿಡ್ಜ್ ಮೂಲಕ ಮೆಜೆಸ್ಟಿಕ್ ತಲುಪಿದ್ದಾರೆ. ಬಾಲಕಿಯ ಬಳಿ ಆಧಾರ್ ಕಾರ್ಡ್ ಇದ್ದಿದ್ದರಿಂದ … Continue reading ಆಧಾರ್ ಕಾರ್ಡ್ ಇತ್ತು, ಬಸ್ ಫ್ರೀ ಇತ್ತು: ಮನೆ ಬಿಟ್ಟ ಮಕ್ಕಳು ಸಿಕ್ಕಿದ್ದು ಭದ್ರಾವತಿಯಲ್ಲಿ!