ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೆಹಲಿಯಲ್ಲಿ ನಡೆದಿದ್ದ ಶ್ರದ್ಧಾ ವಾಕರ್ ಮಾದರಿಯಲ್ಲಿಯೇ ಯುವತಿಯ ಬರ್ಬರ ಹತ್ಯೆ ನಡೆದಿದೆ. ವೈಯ್ಯಾಲಿ ಕಾವಲ್ ಪೈಪ್ ಲೈನ್ ರಸ್ತೆಯ ವೀರಣ್ಣ ಭವನದ ಬಳಿಯ ಮಹಿಳೆಯ ಮೃತದೇಹವನ್ನು 30 ಕ್ಕೂ ಹೆಚ್ಚು ಪೀಸ್, ಪೀಸ್ ಮಾಡಿ ಫ್ರಿಜ್‌ನಲ್ಲಿ ಮುಚ್ಚಿಟ್ಟಿದ್ದ ಭಯಾನಕ ಘಟನೆ ಬೆಳಕಿಗೆ ಬಂದಿದೆ.
ಕೆಲವು ದಿನಗಳ ಹಿಂದೆಯೇ ಈ ಕೊಲೆ ನಡೆದಿದೆ. ಮನೆಯಿಂದ ಬರುತ್ತಿದ್ದ ವಾಸನೆಯನ್ನು ಗಮನಿಸಿ ಅಕ್ಕ-ಪಕ್ಕದವರು ಮಹಿಳೆಯ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಇಂದು ಮಹಿಳೆಯ ಸಂಬಂಧಿಕರು ಬೀಗ ಹೊಡೆದು ನೋಡಿದಾಗ ಭಯಾನಕ ಕೃತ್ಯ ಬಯಲಾಗಿದೆ.
ಫಸ್ಟ್ ಫ್ಲೋರ್‌ನಲ್ಲಿರುವ 1 BHK ಮನೆಯಲ್ಲಿ 26 ವಯಸ್ಸಿನ ಮಹಿಳೆ ವಾಸವಿದ್ದರು. ಹಂತಕರು ಯುವತಿಯ ಕೊಲೆ ಮಾಡಿ ದೇಹವನ್ನು ತುಂಡು, ತುಂಡಾಗಿ ಕತ್ತರಿಸಿ ಫ್ರಿಜ್‌ನಲ್ಲಿಟ್ಟು ಪರಾರಿಯಾಗಿದ್ದಾರೆ.
165 ಲೀಟರ್ ಫ್ರಿಡ್ಜ್‌ನಲ್ಲಿ ಮಹಿಳೆಯ ಮೃತದೇಹದ ತುಂಡು ಇಡಲಾಗಿತ್ತು. ಮೃತ ಮಹಿಳೆಯನ್ನು ಮಹಾಲಕ್ಷ್ಮೀ ಎಂದು ಗುರುತಿಸಲಾಗಿದೆ. ನೇಪಾಳ ಮೂಲದ ಮಹಾಲಕ್ಷ್ಮೀ ಅವರು ನೆಲಮಂಗಲದ ಹುಕುಂ ಸಿಂಗ್ ರಾಣಾ ಎಂಬುವವರನ್ನು ಮದುವೆಯಾಗಿದ್ದಾರೆ. ಆದರೆ ಮಹಾಲಕ್ಷ್ಮೀ ತನ್ನ ಪತಿ, ಮಗನನ್ನು ಬಿಟ್ಟು ವೈಯಾಲಿಕಾವಲ್‌ನ ಮನೆಯಲ್ಲಿ ವಾಸವಿದ್ದರು.
ಮೃತ ಮಹಿಳೆಯ ಗಂಡ ನೆಲಮಂಗಲದಲ್ಲಿ ಇದ್ದಾನೆ. ಮಗು ಗಂಡನ ಜೊತೆಯಲ್ಲೇ ಇದೆ. ಮದುವೆಯಾಗಿ ಹಲವು ವರ್ಷಗಳ ಬಳಿಕ ಮಹಿಳೆ ಗಂಡನಿಂದ ಬೇರೆಯಾಗಿದ್ದಾಳೆ. ಪತಿಯಿಂದ ಬೇರೆಯಾದ ಬಳಿಕ ಈಕೆ ಒಬ್ಬಳೇ ವಾಸವಿದ್ದಾಳೆ. ಮನೆಗೆ ಓರ್ವ ಯುವಕ ಡ್ರಾಪ್ ಮಾಡುವುದು ಪಿಕ್ ಅಪ್ ಮಾಡುವ ಕೆಲಸ ಮಾಡ್ತಿದ್ದನಂತೆ. ಒಬ್ಬಳೇ ಮನೆಯಲ್ಲಿದ್ದಾಗ ಮಹಿಳೆಯ ಬರ್ಬರ ಹತ್ಯೆಯಾಗಿದೆ.
ಬೆಂಗಳೂರಿನ ಖಾಸಗಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮೀ ಅವರು ಕಳೆದ ಸೆಪ್ಟೆಂಬರ್ 2ರಿಂದ ಯಾರ ಫೋನ್ ಸ್ವೀಕರಿಸುತ್ತಿರಲಿಲ್ಲ. ಇಂದು ಬಾಗಿಲು ತೆರೆದಾಗ ಫ್ರಿಡ್ಜ್‌ನಿಂದ ಹುಳಗಳು ಹೊರಗೆ ಬರುತ್ತಾ ಇತ್ತು. ಮೇಲ್ನೋಟಕ್ಕೆ ಸುಮಾರು 19 ದಿನಗಳ ಹಿಂದೆಯೇ ಮಹಿಳೆಯ ಕೊ*ಲೆ ನಡೆದಿರೋ ಶಂಕೆ ವ್ಯಕ್ತವಾಗಿದೆ. ಮಹಿಳೆಯ ಮೃತದೇಹವನ್ನು 30 ರಿಂದ 35 ತುಂಡುಗಳಾಗಿ ಕತ್ತರಿಸಿದ್ದಾರೆ. ಸ್ಥಳಕ್ಕೆ FSL ಹಾಗೂ ವೈದ್ಯಾಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.