ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಬೆಂಗಳೂರಿನ ಮಸಾಲೆದೋಸೆ ತಿಂದು ಫಿದಾ ಆಗಿದ್ದ ಬ್ರಿಟೀಷ್ ಹೈಕಮೀಷನರ್ ಅಲೆಕ್ಸ್ ಎಲ್ಲಿಸ್, ಇದೀಗ ಮುಂಬೈ ನ ಫೇಮಸ್ ವಡಾ ಪಾವ್ ಗೆ ಮನಸೋತ್ತಿದ್ದಾರೆ.
ಮುಂಬೈ ಪ್ರವಾಸದಲ್ಲಿರುವ ಎಲ್ಲಿಸ್, ಸಿಎಂ ಸೇರಿದಂತೆ ಇತರೆ ಅಧಿಕಾರಿಗಳನ್ನು ಭೇಟಿ ಮಾಡಿ ಗಣಪತಿ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ ಮುಂಬೈ ನ ಸ್ಟ್ರೀಟ್ ಫುಡ್ ವಡಾ ಪಾವ್ ಸೇವಿಸಿದ್ದು, ಅದರ ರುಚಿಗೆ ವಾವ್ಹ್ ಎಂದು ಕೊಂಡಾಡಿದ್ದಾರೆ. ಮುಂಬೈ ನ ಗೇಟ್ ವೇ ಆಫ್ ಇಂಡಿಯಾ ಬಳಿ ಫೋಟೋ ಗೆ ಪೋಸ್ ಕೊಟ್ಟಿರುವ ಅವರು, ಮುಂಬೈ ನಲ್ಲಿ ವಡಾ ಪಾವ್ ಸವಿಯಲು ಯಾವಾಗಲೂ ಸಮಯವಿದೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಮುಂಬೈ ನ ಡಬ್ಬಾವಾಲಾಗಳನ್ನು ಭೇಟಿಯಾಗಿ ಅವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೇಳೆ ಎಲ್ಲಿಸ್ ಗೆ ಡಬ್ಬಾವಾಲಾಗಳು ಟಿಫನ್ ಬಾಕ್ಸ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಫೋಟೋಗಳಿಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದು, ಐಷಾರಾಮಿ ಹೋಟೆಗಳಿಗಿಂದ ಈ ಸ್ಟ್ರೀಟ್ ಫುಡ್ ಗಳಲ್ಲೇ ಹೆಚ್ಚು ರುಚಿಸಿಗಲಿದೆ ಎಂದು ಕಮೆಂಟ್ ಮಾಡಿದ್ದಾರೆ.