ಹೊಸದಿಗಂತ ಆನ್ ಲೈನ್ ಡೆಸ್ಕ್:
ಮೊಬೈಲ್ ಗೆ ನಾವೆಲ್ಲರೂ ಅಡಿಕ್ಟ್ ಆಗಿದ್ದೇವೆ ಒಂದು ಕ್ಷಣ ಮೊಬೈಲ್ ಚಾರ್ಜ್ ಇಲ್ಲದಿದ್ದರೆ ನಮ್ಮ ದಿನದ ಕೆಲಸಗಳೆಲ್ಲಾ ತಲೆಕೆಳಗಾಗುತ್ತದೆ. ಹೀಗಿರುವಾಗ ಯಾರಾದರೂ ತಮ್ಮ ಚಾರ್ಜರ್ ಕೊಟ್ರೆ ಸಾಕು ಅಂದುಕೊಳ್ತೀವಿ… ಆದರೆ ನೆನಪಿಡಿ ನೀವು ಮೊಬೈಲ್ ಚಾರ್ಜ್ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ..
- ನಿಮ್ಮದೇ ಚಾರ್ಜರ್ ಬಳಸಿ.
- ಲೋಕಲ್, ಬ್ರ್ಯಾಂಡ್ ರಹಿತ ಚಾರ್ಜರ್ ಬಳಸಬೇಡಿ
- ಮೊಬೈಲ್ ಕೇಸ್, ಕವರ್ ತೆಗೆದು ಚಾರ್ಜ್ ಹಾಕಿ.
- ಫಾಸ್ಟ್ ಚಾರ್ಕರ್ ಬಳಸಬೇಡಿ
- ಬ್ಯಾಟರಿ ಉಳಿಸೋಕೆ ಆಪ್ ಗಳ ಮೊರೆ ಹೋಗಬೇಡಿ
- ಕನಿಷ್ಠ 80% ಚಾರ್ಜ್ ಆಗಲು ಬಿಡಿ.
- ಯಾವಾಗಲೂ ಚಾರ್ಜ್ ಗೆ ಇಡಬೇಡಿ. 20%ಗಿಂತ ಕಡಿಮೆ ಇದ್ದರೆ ಮಾತ್ರ ಚಾರ್ಜ್ ಹಾಕಿ.
- ಒಳ್ಳೆ ಕಂಪನಿ ಪವರ್ ಬ್ಯಾಂಕ್ ಖರೀದಿಸಿ.
- ಮೊಬೈಲ್ ಜಾಸ್ತಿ ಹೀಟ್ ಆಗಲು ಬಿಡಬೇಡಿ.
- ಚಾರ್ಜ್ ಆಗುವಾಗ ಮೊಬೈಲ್ ಬಳಸಬೇಡಿ.
- ರಾತ್ರಿ ಇಡೀ ಮೊಬೈಲ್ ಚಾರ್ಜ್ ಗೆ ಇಡಬೇಡಿ.