ಸೇವಿಸುವ ಆಹಾರ ಜೀರ್ಣವಾಗದೇ ಮಲಬದ್ಧತೆ ಉಂಟಾಗುತ್ತದೆ. ಇದು ನಮ್ಮ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ಆದರೆ ಈ ಮಲಬದ್ಧತೆಯಿಂದ ಪಾರಾಗಲು ಔಷಧಗಳ ಮೊರೆಹೋಗುವ ಬದಲಿಗೆ ಈ ಟೀಸ್ಟಿ ಜ್ಯೂಸ್ ಗಳನ್ನು ಕುಡಿಯಿರಿ…
ಕಿತ್ತಳೆ ಜ್ಯೂಸ್: ಇದರಲ್ಲಿನ ವಿಟಮಿನ್ ಸಿ ಹಾಗೂ ಖನಿಕಾಂಶ, ನಾರಿನಾಂಶಗಳು ಜೀರ್ಣಕ್ರಿಯಗೆ ಹೆಚ್ಚು ಸಹಕಾರಿಯಾಗಲಿದೆ. ಕಿತ್ತಳೆ ಜ್ಯೂಸ್ ಸೇವಿಸುವುದರಿಂದ ಕರುಳಿನಲ್ಲಿ ತೊಂದರೆಯಾಗದೇ ಮಲಬದ್ಧತೆ ನಿವಾರಣೆಯಾಗುತ್ತದೆ.
ನಿಂಬು ಜ್ಯೂಸ್: ನಿಂಬುವಿನಲ್ಲಿರುವ ನಾರಿನಾಂಶ ಹಾಗೂ ವಿಟಮಿನ್ಸ್ ನಮ್ಮ ದೇಹದಲ್ಲಿ ರೋಗನಿರೋಧಕವಾಗಿ ಕಾರ್ಯ ನಿರ್ವಹಿಸುತ್ತದೆ.
ದ್ರಾಕ್ಷಿ ಜ್ಯೂಸ್: ದೇಹವನ್ನು ಹೈಡ್ರೇಟ್ ಮಾಡಿ, ಮಲವಿಸರ್ಜನೆಯನ್ನು ಸರಾಗವಾಗಿಸಲು ಗ್ರೇಪ್ ಜ್ಯೂಸ್ ಹೆಚ್ಚು ಸಹಕಾರಿಯಾಗಲಿದೆ. ಇದರ ಜೊತೆಗೆ ಸ್ವಲ್ಪ ಶುಂಠಿಯೂ ಸೇರಿಸಿಕೊಳ್ಳಬಹುದು.
ಅನಾನಸ್ ಜ್ಯೂಸ್: ಇದರಲ್ಲಿರುವ ಬ್ರೊಮೆಲೈನ್ ಎಂಬ ಅಂಶವು ಮಲಬದ್ಧತೆಯನ್ನು ಹೋಗಲಾಡಿಸಲು ಸಹಾಕಾರಿಯಾಗಿದ್ದು, ಮಲವಿಸರ್ಜನೆಯನ್ನು ನಿಯಂತ್ರಿಸುತ್ತದೆ.
ಸೇಬಿನ ಜ್ಯೂಸ್: ಸೇಬು ಎಲ್ಲಾ ಸಮಯದಲ್ಲೂ ಸಹಾಯ ಮಾಡುತ್ತದೆ. ಮಧುಮೇಹ, ಮಲಬದ್ಧತೆ ಸೇರಿದಂತೆ ಅನೇಕ ರೋಗಗಳಿಗೆ ರಾಮಬಾಣವಾಗುತ್ತದೆ. ಸೇಬಿನ ಜ್ಯೂಸ್ ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.