ಹೊಸದಿಗಂತ ಡಿಜಿಟಲ್ ಡೆಸ್ಕ್:
ಅನೇಕ ಜನರು ಖಾಲಿ ಇರುವ ಸಮಯದಲ್ಲಿ ತಮ್ಮ ಬೇಸರ ಹೋಗಲಾಡಿಸಲು ಕಡಲೆಬೀಜ ತಿನ್ನುವುದಿ ರೂಢಿ. ಬಸ್‌ನಲ್ಲಿ ಪ್ರಯಾಣಿಸುವಾಗ, ಕೆಲಸ ಮಾಡುವ, ಕಾಲಿ ಕೂತಿರುವಾಗ, ಏನಾದರೂ ತಿನ್ನಬೇಕೆನಿಸಿದಾಗ ಥಟ್ ಅಂತ ನೆನಪಿಗೆ ಬರೋದೆ ಕಡಲೆಬೀಜ. ಈ ಪದಾರ್ಥ ಸೇವನೆಯಿಂದ ನಿಮಗೆ ಪ್ರೋಟೀನ್, ಆರೋಗ್ಯಕರ ಕೊಬ್ಬುಗಳು, ಫೈಬರ್, ವಿಟಮಿನ್‌ಗಳು, ಬಿ ವಿಟಮಿನ್‌ಗಳು ಮತ್ತು ವಿಟಮಿನ್ ಇ ನಂತಹ ಖನಿಜಗಳು ಸಿಗುತ್ತವೆ. ಇದರಿಂದ ಅನೇಕ ಅನಾರೋಗ್ಯ ಸಮಸ್ಯೆಗಳು ದೂರವಾಗುತ್ತವೆ.
ದೃಷ್ಟಿ ಸುಧಾರಣೆ:
ಕಣ್ಣುಗಳು ದುರ್ಬಲವಾಗದಿರಲು ಕಡಲೆಬೀಜವನ್ನು ಆಹಾರದಲ್ಲಿ ಸೇರಿಸುವುದು ಒಳ್ಳೆಯದು.ಇದು ವಿಟಮಿನ್ ಎ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ದೃಷ್ಟಿ ದೋಷ ಇದ್ದರೆ ನಿವಾರಣೆಯಾಗುತ್ತದೆ.
ಮೂಳೆ ಬಲಪಡಿಸುತ್ತದೆ:
ನಿಮ್ಮ ಮೂಳೆಗಳನ್ನು ಬಲಪಡಿಸಲು ಕಡಲೆಬೀಜ ತಿನ್ನಿರಿ. ಮ್ಯಾಂಗನೀಸ್ ಮತ್ತು ರಂಜಕದಲ್ಲಿ ಸಮೃದ್ಧವಾಗಿರುವ ಕಡಲೆಕಾಯಿ ಮೂಳೆಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು:
ಕಡಲೆಕಾಯಿ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಶೇಂಗಾ ತಿನ್ನುವುದರಿಂದ ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ. ದೀರ್ಘಾವಧಿಯಲ್ಲಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.
ಖಿನ್ನತೆಯನ್ನು ಕಡಿಮೆ ಮಾಡುವಲ್ಲಿ;
ಇತ್ತೀಚಿನ ದಿನಗಳಲ್ಲಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಿದೆ. ಅಂತಹ ಪರಿಸ್ಥಿತಿಯಲ್ಲಿ ಕಡಲೆಕಾಯಿಯನ್ನು ತಿನ್ನುವುದರಿಂದ ಸಮಸ್ಯೆಗಳನ್ನು ಕಡಿಮೆ ಮಾಡಬಹುದು. ಇದರಲ್ಲಿರುವ ಟ್ರಿಪ್ಟೊಫಾನ್ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಖಿನ್ನತೆಯನ್ನು ಎದುರಿಸಲು ಸಹಾಯ ಮಾಡುತ್ತದೆ.