ನಿಮ್ಮ ಫೇವರೆಟ್ ಡೆಸರ್ಟ್ ಯಾವುದು? ಕೇಕ್ ಅಂತೀರಾ? ಇನ್ನು ಹುಟ್ಟಿದ ದಿನ, ಆನಿವರ್ಸರಿ, ಎಂಗೇಜ್ಮೆಂಟ್, ವ್ಯಾಲೆಂಟೈನ್ಸ್ ಡೇ ಪ್ರತಿ ಒಂದನ್ನು ಜನ ಕೇಕ್ ಕಟ್ ಮಾಡುತ್ತಾರೆ. ಇದರಲ್ಲಿ ಅವರಿಷ್ಟದ ಫ್ಲೇವರ್ ಕೇಕ್ ಅಥವಾ ಪೇಸ್ಟ್ರಿಯನ್ನು ತಂದು ತಿನ್ನುತ್ತಾರೆ. ಆಗಿನ್ನು ಕೇಕ್ ಕತ್ತರಿಸಿ ಐದು ನಿಮಿಷವೂ ಆಗಿರುವುದಿಲ್ಲ ಎಲ್ಲ ಕೇಕ್ ಕಾಲಿಯೇ ಆಗುತ್ತದೆ. ಜನರ ಫೇವರೆಟ್ ಕೇಕ್ ಯಾವುದು ಗೊತ್ತಾ? ಜನರು ಅತಿ ಹೆಚ್ಚು ಇಷ್ಟಪಡುವ ಕೇಕ್ಗಳು ಇವು..
ಚಾಕೊಲೇಟ್ ಕೇಕ್
ಇದು ತುಂಬಾ ಜನರ ಫೇವರೆಟ್ ಕೇಕ್. ಸಣ್ಣವರಿದ್ದಾಗ ಅತಿ ಹೆಚ್ಚು ಫ್ಲೇವರ್ಗಳ ಅರಿವು ಇರುತ್ತಿರಲಿಲ್ಲ. ಆಗೆಲ್ಲ ಗೊತ್ತಿರೋದು ಚಾಕೋಲೆಟ್ ಕೇಕ್ ಮಾತ್ರ. ಇದು ಜನರ ಟಾಪ್ ಮೋಸ್ಟ್ ಫೇವರೆಟ್ ಕೇಕ್!
ವೆನಿಲಾ ಫ್ಲೇವರ್
ವೆನಿಲಾ ಕೇಕ್ ಅಥವಾ ಪೆಸ್ಟ್ರಿ ಮೈಲ್ಡ್ ಆಗಿ ಇರುತ್ತದೆ. ವಯಸ್ಸಾದವರೂ ಸಹ ಇಷ್ಟಪಟ್ಟು ತಿನ್ನುತ್ತಾರೆ. ಮುಂದಿನ ಬಾರಿ ಅಪ್ಪ ಅಮ್ಮನ ಆನಿವರ್ಸರಿಗೆ ಇದೇ ಕೇಕ್ ಕಟ್ ಮಾಡಿಸಿ. ನೀವೂ ತಿನ್ನಿ..
ಪೈನಾಪಲ್ ಕೇಕ್
ಪೈನಾಪಲ್ ಕೇಕ್ ಕೂಡ ಜನರ ಫೇವರೆಟ್. ಇದರ ಫ್ಲೇವರ್ ಮೈಲ್ಡ್ ಆಗಿರುವುದಿಲ್ಲ. ತಿಂದರೆ ಪೈನಾಪಲ್ ಕೇಕ್ ಎಂದು ಆರಾಮಾಗಿಯೇ ಗೊತ್ತಾಗುತ್ತದೆ. ಸ್ವಲ್ಪ ಸಿಹಿ ಹೆಚ್ಚಿರೋದ್ರಿಂದ ತುಂಬಾ ಕೇಕ್ ತಿನ್ನೋಕೆ ಸ್ವಲ್ಪ ಕಷ್ಟ ಆಗಬಹುದು.
ರೆಡ್ ವೆಲ್ವೆಟ್
ಹುಡುಗಿಯರ ಫೇವರೆಟ್ ರೆಡ್ ವೆಲ್ವೆಟ್ ಕೇಕ್. ಇದೇನಿದು ಇಷ್ಟು ಕೆಂಪಗಿದೆ ಅಂತ ಭಯ ಬೀಳ್ಬೇಡಿ. ಇದಕ್ಕೆ ಅಷ್ಟೊಂದು ಆರ್ಟಿಫಿಶಿಯಲ್ ಬಣ್ಣ ಬಳಸುವುದಿಲ್ಲ. ಇದಕ್ಕೆ ಹಾಕುವ ಕೆಂಪು ಬೀಟ್ರೂಟ್ ರಸ.
ಸ್ಟ್ರಾಬೆರಿ
ಸ್ಟ್ರಾಬೆರಿ ಕೇಕ್ ಎಲ್ಲರಿಗೂ ಹಿಡಿಸುವುದಿಲ್ಲ. ಎದ್ದು ಕಾಣುವ ಫ್ಲೇವರ್ ಇರುವುದರಿಂದ ಮಕ್ಕಳಿಗೆ ಇದು ಇಷ್ಟವಾಗುತ್ತದೆ. ಸ್ಟ್ರಾಬೆರಿ ಬಳಸದೇ ಅತೀ ಹೆಚ್ಚು ಆರ್ಟಿಫಿಶಿಯಲ್ ಫ್ಲೇವರ್ಗಳನ್ನು ಬಳಸಿದ್ದಾರೆ ಎಂದು ತಿಂದವರಿಗೆ ಅನಿಸುತ್ತದೆ.
ಬ್ಲಾಕ್ ಫಾರೆಸ್ಟ್
ಈ ಕೇಕ್ ನೋಡಲು ತುಂಬಾನೇ ಅಟ್ರಾಕ್ಟೀವ್. ಇದರಲ್ಲಿ ಚಾಕೋಲೇಟ್ ನ ಮಲ್ಟಿ ಲೇಯರ್ಗಳಿವೆ. ಜೊತೆಗೆ ವಿಪ್ಡ್ ಕ್ರೀಂ ಹಾಗೂ ಚೆರ್ರಿ ಕೂಡ ಇದೆ. ಅಪರೂಪಕ್ಕೆ ತಿನ್ನೋದಕ್ಕೆ ಇದು ಬೆಸ್ಟ್ ಕೇಕ್.
ಬಟರ್ಸ್ಕಾಚ್
ಈ ಫ್ಲೇವರ್ ಈಸಿಯಾಗಿ ಇಷ್ಟವಾಗಿಬಿಡುತ್ತದೆ. ಜನ ಅಷ್ಟು ಐಸ್ಕ್ರೀಂ ತಿಂದಾಗ ಅದರಲ್ಲಿನ ಬಟರ್ಸ್ಕಾಚ್ ಫ್ಲೇವರ್ ಹಾಗೂ ಇದು ಹೊಂದುತ್ತದೆ. ಗೊತ್ತಿರುವುದನ್ನು ತಿಣದಾಗ ಜನ ಬಹಳ ಬೇಗ ಇಷ್ಟಪಡುತ್ತಾರೆ.
ಮ್ಯಾಂಗೋ ಕೇಕ್
ಇದೆಲ್ಲವೂ ರೇರ್ ಫ್ಲೇವರ್ಸ್. ಎಲ್ಲ ಕಡೆಯೂ ನಿಮಗೆ ಮ್ಯಾಂಗೋ ಕೇಕ್ ಸಿಗೋದಿಲ್ಲ. ಹೇಳಿ ಮಾಡಿಸಬೇಕಾಗುತ್ತದೆ. ಸ್ವಲ್ಪ ಸಿಹಿ, ಹುಳಿ ಎರಡೂ ಕೂಡ ಈ ಕೇಕ್ನಲ್ಲಿದೆ. ಎಂದೂ ಟ್ರೈ ಮಾಡದವರು ಖಂಡಿತಾ ಈ ಕೇಕ್ ಒಮ್ಮೆಯಾದರೂ ಟ್ರೈ ಮಾಡಿ.
ಫ್ರೆಶ್ ಫ್ರೂಟ್ ಕೇಕ್
ಇಲ್ಲಿ ಎಲ್ಲ ರೀತಿಯ ಹಣ್ಣುಗಳಿವೆ. ಒಂದು ಫ್ಲೇವರ್ ಆರಿಸಲು ಕಷ್ಟ ಆದರೆ ಎಲ್ಲ ಹಣ್ಣುಗಳಿರುವ ಈ ಕೇಕ್ ತಿಂದುಬಿಡಿ. ಇದನ್ನು ದೊಡ್ಡವರು ಕೂಡ ಇಷ್ಟಪಡುತ್ತಾರೆ. ಏಕೆಂದರೆ ಇದರಲ್ಲಿ ಹೆಚ್ಚು ಹಣ್ಣುಗಳಿವೆ.
ಓರಿಯೋ ಕೇಕ್
ಇದೆಲ್ಲವೂ ಇತ್ತೀಚೆಗೆ ಮಾರ್ಕೆಟ್ಗೆ ಬಂದ ಫ್ಲೇವರ್ಸ್. ಓರಿಯೋ ಬಿಸ್ಕೆಟ್ ತಿನ್ನುವವರಿಗೆ ಈ ಫ್ಲೇವರ್ ಹಿಡಿಸುತ್ತದೆ. ಕೇಕ್ನ ಮಧ್ಯೆ ಬಿಸ್ಕೆಟ್ ತುಣುಕುಗಳು ಸಿಗುತ್ತದೆ. ಕೇಕ್ ಸ್ವಲ್ಪ ಸಿಹಿ, ಸ್ವಲ್ಪ ಉಪ್ಪಾಗಿರುತ್ತದೆ.