Monday, December 11, 2023

Latest Posts

HEALTH| ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್‌ ಆದ ʻಫ್ರೈಡ್‌ ರೈಸ್‌ ಸಿಂಡ್ರೋಮ್‌ʼ ಎಂದರೇನು?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

‘ಫ್ರೈಡ್ ರೈಸ್ ಸಿಂಡ್ರೋಮ್’ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡಿಂಗ್ ಆಗಿದೆ. ಈ ಸಿಂಡ್ರೋಮ್ ಎಂದರೇನು? ಅದರ ಗುಣಲಕ್ಷಣಗಳೇನು? ಅನ್ನೋದನ್ನು ಮುಂದೆ ಓದಿ…

‘ಫ್ರೈಡ್ ರೈಸ್ ಸಿಂಡ್ರೋಮ್’ ಎಂಬುದು ಬ್ಯಾಸಿಲಸ್ ಸೆರಿಯಸ್ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ವಿಷಾಹಾರ. ಅನ್ನ, ಪಾಸ್ತಾ, ತರಕಾರಿಗಳು ಮತ್ತು ಮಾಂಸದಂತಹ ಆಹಾರಗಳಲ್ಲಿ ಬ್ಯಾಸಿಲಸ್ ಸೆರಿಯಸ್ ಬ್ಯಾಕ್ಟೀರಿಯಾಗಳು ರೂಪುಗೊಳ್ಳಬಹುದು. 20 ವರ್ಷದ ಬೆಲ್ಜಿಯಂ ವಿದ್ಯಾರ್ಥಿಯ ಸಾವನ್ನು ಒಳಗೊಂಡ 2008 ರ ಪ್ರಕರಣವು ಮತ್ತೆ ಸುದ್ದಿಯಾದ ಬಳಿಕ ಈ ಬ್ಯಾಕ್ಟೀರಿಯಾದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿತು.

ಜರ್ನಲ್ ಆಫ್ ಕ್ಲಿನಿಕಲ್ ಮೈಕ್ರೋಬಯಾಲಜಿಯಲ್ಲಿ ಪ್ರಕಟವಾದ ಪ್ರಕರಣದ ವರದಿಯ ಪ್ರಕಾರ, ವಿದ್ಯಾರ್ಥಿಯೊಬ್ಬ ಕನಿಷ್ಠ ಐದು ದಿನಗಳ ಕಾಲ ರೆಫ್ರಿಜರೇಟರ್‌ನಲ್ಲಿ ಇಡದ ಆಹಾರವನ್ನು ಮೈಕ್ರೋವೇವ್ನಲ್ಲಿಟ್ಟು ಬಿಸಿ ಮಾಡಿ ಸೇವಿಸಿದ್ದಾನೆ. ಬಳಿಕ ತಲೆನೋವು, ವಾಂತಿ ಮತ್ತು ಹೊಟ್ಟೆನೋವಿನಿಂದ ಒದ್ದಾಡಿ ಸಾವನ್ನಪ್ಪಿದ್ದ. ಘಟನೆಯ 15 ವರ್ಷಗಳ ನಂತರ, ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತೊಮ್ಮೆ ‘ಫ್ರೈಡ್ ರೈಸ್ ಸಿಂಡ್ರೋಮ್’ ಅನ್ನು ಬೆಳಕಿಗೆ ತಂದಿವೆ.

ಈ ಬ್ಯಾಸಿಲಸ್ ಸೆರಿಯಸ್ ಎಂಬುದು ಪರಿಸರದಾದ್ಯಂತ ಕಂಡುಬರುವ ಸಾಮಾನ್ಯ ಬ್ಯಾಕ್ಟೀರಿಯಾ. ಬೇಯಿಸಿ ಸಂಗ್ರಹಿಸಿದ ಆಹಾರವನ್ನು ಹೆಚ್ಚಿನ ತಾಪಮಾನದಲ್ಲಿ ಬಿಸಿ ಮಾಡಿದಾಗ ಈ ಬ್ಯಾಕ್ಟೀರಿಯಾಗಳು ಬೆಳೆಯುತ್ತವೆ. ಈ ಬ್ಯಾಕ್ಟೀರಿಯಾ ಆಹಾರವನ್ನು ವಿಷವಾಗಿ ಪರಿವರ್ತಿಸುತ್ತದೆ. ಆಹಾರ ವಿಷವಾಗುವುದನ್ನು ತಪ್ಪಿಸಲು ಎಷ್ಟು ಬೇಕೋ ಅಷ್ಟು ಪ್ರಮಾಣದ ಆಹಾರ ಬೇಯಿಸುವುದು ಉತ್ತಮ ಅಥವಾ ಉಳಿದಿರುವುದನ್ನು ತಿನ್ನದಂತೆ ಇರುವುದು ಮೇಲು.

https://twitter.com/BoodyRed22/status/1722366339015159844?ref_src=twsrc%5Etfw%7Ctwcamp%5Etweetembed%7Ctwterm%5E1722366339015159844%7Ctwgr%5E5666545ef70ee9c3fa1c1a1199769ca4753207d0%7Ctwcon%5Es1_&ref_url=https%3A%2F%2F10tv.in%2Ftelugu-news%2Flife-style%2Fthese-are-the-symptoms-of-fried-rice-syndrome-trending-on-social-media-737097.html

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!