ಸುಮ್ಮನೆ ಯೋಚಿಸಿ 10 ವರ್ಷಗಳ ಹಿಂದೆ ನಮ್ಮ ಜೀವನ ಹೀಗೆ ನಡೆಯುತ್ತಿತ್ತಾ? ಬೆಳಗ್ಗೆ ಎದ್ದಾಗಿನಿಂದ ಮೊಬೈಲ್ ನಲ್ಲೇ ಮುಳುಗಿ ಹೋಗಿರುತ್ತಿದ್ವಾ? ಇಲ್ಲ.. ದಶಕಗಳ ಹಿಂದೆ ನಾವು ಕೇಳಿರದ ತಂತ್ರಜ್ಞಾನಗಳು ಈಗ ನಮ್ಮ ನಿತ್ಯದ ಬದುಕಾಗಿಬಿಟ್ಟಿದೆ. ಯಾವುದೆಲ್ಲಾ ಅಂತೀರಾ? ಒಮ್ಮೆ ಈ ಲಿಸ್ಟ್ ನೋಡಿ ನಿಮಗೆ ಗೊತ್ತಾಗುತ್ತೆ..
- ಓಲಾ, ಊಬರ್: ಈಗ ನಾವು ರಸ್ತೆ ಮೂಲೆಯಲ್ಲಿ ನಿಂತು ‘ಆಟೋ’ ಎಂದು ಕೂಗುವ ಅಗತ್ಯವೇ ಇಲ್ಲ. ಎಲ್ಲವೂ ನಮ್ಮ ಬೆರಳಂಚಿನಲ್ಲಿದೆ.
- ಇನ್ಸ್ ಟಾಗ್ರಾಂ: ಈಗೆಲ್ಲಾ ರೀಲ್ಸ್ ನಲ್ಲಿ ಮುಳುಗಿರೋರು 10 ವರ್ಷಗಳ ಹಿಂದೆ ಏನು ಮಾಡುತ್ತಿದ್ದೆವು ನೆನಪಿಸಿಕೊಳ್ಳಿ.
- ಸೆಲ್ಫಿ ಸ್ಟಿಕ್: ಆಗೆಲ್ಲಾ ಫೋಟೋ ತೆಗೆಯೋಕೆ ಒಬ್ಬ ಛಾಯಾಗ್ರಾಹಕ ಸಣ್ಣ camera ಹಿಡಿದು ಬರಬೇಕಿತ್ತು. ಆದರೆ ಈಗ ನಾವೇ ಎಲ್ಲಾ ಮಾಡಿಕೊಳ್ಳುತ್ತೇವೆ.
- ಅಲೆಕ್ಸಾ/ಸಿರಿ: ನಮ್ಮ ಜೀವನದಲ್ಲಿ ನಮಗೂ ಒಬ್ಬ ಅಸಿಸ್ಟೆಂಟ್ ಇರ್ತಾರೆ ಅಂದುಕೊಂಡಿರಲಿಲ್ಲ. ಆದರೆ ಈ ಟೆಕ್ ಅಸಿಸ್ಟೆಂಟ್ ಗಳು ಎಷ್ಟೋ ಜನರಿಗೆ ಸಹಾಯವಾಗುತ್ತಿದೆ.
- ಗೂಗಲ್ ಕ್ರೋಮ್: ಈಗಷ್ಟು ಸುಲಭವಾಗಿ ನಾವ್ಯಾರೂ ಗೂಗಲ್ ಕ್ರೋಮ್ ಅನ್ನು 10 ವರ್ಷಗಳ ಹಿಂದೆ ಬಳಸಿರೋಕೆ ಚ್ಯಾನ್ಸೆ ಇಲ್ಲ.
- ಸ್ನಾಪ್ ಚಾಟ್: 10 ವರ್ಷಗಳ ಹಿಂದೆ ಹೀಗೆಲ್ಲ ಡಿಫರೆಂಟ್ ಆಗಿ ಅಪ್ರೋಚ್ ಮಾಡುವ ಆಪ್ ಖಂಡಿತ ಇರಲಿಲ್ಲ.
- ಏರ್ ಪಾಡ್ಸ್/ ಬ್ಲೂಟೂತ್: ಲ್ಯಾಂಡ್ ಲೈನ್, ಕೀ ಪ್ಯಾಡ್ ಗಳಿದ್ದ ಕಾಲದಲ್ಲಿ ಸ್ಮಾರ್ಟ್ ಫೋನ್ ಅನ್ನೋದೆ ದೊಡ್ಡ ವಿಷಯವಾಗಿತ್ತು. ಈಗ ಅದರ ಬ್ಲೂಟೂತ್, ಏರ್ ಪಾಡ್ಸ್ ಗಳು ಜನರ ಜೀವನವನ್ನೇ ಬದಲಾಯಿಸಿದೆ.
- ವರ್ಚುವಲ್ ರಿಯಾಲಿಟಿ: ತಂತ್ರಜ್ಞಾನದ ವೇಗದಲ್ಲಿ ಇದೊಂದು ವಿಭಿನ್ನ ಆವಿಷ್ಕಾರ.
- ಫಿಂಗರ್ ಪ್ರಿಂಟ್: 2011ರವರೆಗೆ ನಾವೆಂದು ಮೊಬೈಲ್ ಗೆ ಫಿಂಗರ್ ಪ್ರಿಂಟ್ ಬರಬಹುದು ಅಂತ ಯೋಚನೆ ನೂ ಮಾಡಿರಲಿಲ್ಲ