HEALTH | ದೇಹದಲ್ಲಿ ಸಾಕಷ್ಟು ನೀರಿಲ್ಲ ಎಂದರೆ ಈ ಲಕ್ಷಣಗಳು ಕಾಣುತ್ತವೆ..

ನಮ್ಮ ದೇಹಕ್ಕೆ ಬೇಕಾದಷ್ಟು ನೀರನ್ನು ನಾವು ಕುಡಿಯುತ್ತಿದ್ದೀವಾ? ದೇಹ ಹೈಡ್ರೇಟ್ ಆಗಿದೆಯೋ ಇಲ್ಲವೋ ಎಂದು ತಿಳಿಯಲು ನಮ್ಮ ದೇಹ ಸಾಕಷ್ಟು ಸಂದೇಶಗಳನ್ನು ಕಳಿಸುತ್ತದೆ. ನಾವು ಅದನ್ನು ಡೀಹೈಡ್ರೇಷನ್‌ನ ಲಕ್ಷಣಗಳು ಎನ್ನಬಹುದು.. ದೇಹದಲ್ಲಿ ನೀರು ಕಡಿಮೆ ಇದ್ದರೆ ಏನೆಲ್ಲಾ ಲಕ್ಷಣಗಳು ಕಾಣುತ್ತವೆ ಇಲ್ಲಿ ನೋಡಿ..

  • ಯಾವಾಗಲೂ ಬಾಯಾರಿಕೆ
  • ತುಟಿಗಳು ಒಡೆಯುವುದು
  • ಬಾಯಿಯಿಂದ ದುರ್ವಾಸನೆ
  • ಯಾವಾಗಲೂ ಸುಸ್ತು
  • ಗಾಢ ಬಣ್ಣ ಹಾಗೂ ವಾಸನೆಯುಕ್ತ ಮೂತ್ರ
  • ಮಾಮೂಲಿಗಿಂತ ಕಡಿಮೆ ಮೂತ್ರ ವಿಸರ್ಜನೆ
  • ಚರ್ಮ ಒಣಗಿದಂತೆ ಕಾಣುವುದು, ಹೊಳಪು ಇಲ್ಲದಿರುವುದು
  • ಲೋ ಬಿಪಿ
  • ಮಸಲ್‌ಗಳಲ್ಲಿ ಕ್ರಾಂಪ್ ಆಗುವುದು
  • ಮಲಬದ್ಧತೆ
  • ತಲೆನೋವು

ಇದನ್ನು ಹೋಗಲಾಡಿಸುವುದು ಹೇಗೆ?

  • ಹೆಚ್ಚು ನೀರು ಹಾಗೂ ನೀರಿನ ಅಂಶ ಇರುವ ಹಣ್ಣುಗಳನ್ನು ಸೇವಿಸಿ
  • ಊಟಕ್ಕೆ ಹೇಗೆ ಸಮಯ ಅಂತಿದೆಯೋ ನೀರು ಕುಡಿಯೋದಕ್ಕೂ ಸಮಯ ಇಟ್ಟುಕೊಳ್ಳಿ
  • ನಿಮ್ಮ ಮೋಟಿವೇಷನ್‌ಗಾಗಿ ಎರಡೂವರೆ ಲೀಟರ್‌ನ ಒಂದು ಬಾಟಲ್ ಇಟ್ಟುಕೊಳ್ಳಿ, ದಿನದಲ್ಲಿ ಆ ಬಾಟಲಿಯಲ್ಲಿರುವ ನೀರು ಖಾಲಿಯಾಗಬೇಕು.
  • ಕೆಫಿನ್ ಸೇವನೆ ಕಡಿಮೆ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!